ಶಿರಾ:
ಶಿರಾದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಬುಧವಾರ ರಾತ್ರಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಾಗರಣೆ ನಡೆಸಿದರು .ಇನ್ನು ಶಿರಾ ನಗರದ ದೊಡ್ಡ ಕೆರೆ ಶ್ರೀ ಪಲ್ಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಬುಧವಾರ ರಾತ್ರಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಾಗರಣೆ ನಡೆಸಿದರು. ಅದರಂತೆ ತಾಲ್ಲೂಕಿನ ಕುಂಬಾರಹಳ್ಳಿ ಸೇರಿದಂತೆ ವಿವಿಧ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಜಾಗರಣೆ ಭಕ್ತರು ಶಿವ ನಾಮಸ್ಮರಣೆ ಮಾಡುತ್ತಾ ಜಾಗರಣೆ ನಡೆಸಿದರು.
ಇದರ ಜೊತೆಗೆ ಶಿವಪಂಚಾಕ್ಷರಿ ಪಠಣ ಮಾಡುವ ಮೂಲಕ ಶಿವರಾತ್ರಿ ಜಾಗರಣೆ ಬಳಿಕ ಭಕ್ತರು ರಾತ್ರಿ ಪೂರ್ತಿ ಸಾಮೂಹಿಕ ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿದರು. ಬೆಳಗಿನ ಜಾವಗಳಲ್ಲಿ ಭಕ್ತರು ದೇವಸ್ಥಾನದಲ್ಲಿ ದೇವರಿಗೆ ರುದ್ರಾಭಿಷೇಕ ಅರ್ಪಿಸಿದರು. ಇದರ ಜೊತೆಗೆ ಪ್ರಸಾದವನ್ನು ವಿತರಣಾ ಮಾಡಲಾಯಿತು.