ಶಿರಾ :
ಪ್ಲೋಕ್ಸೋ ಪ್ರಕರಣ ಸಾಬೀತಾದ ಹಿನ್ನಲೆ ಆರೋಪಿಗೆ ಬರೋಬ್ಬರಿಗೆ 40 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷದ 50 ಸಾವಿರ ದಂಡ ವಿಧಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಹರೀಶ್ ಎಂಬಾತನಿಗೆ ತುಮಕೂರು ಜಿಲ್ಲಾ ಘನ ನ್ಯಾಯಾಲಯದಿಂದ ಆರೋಪ ಸಾಬೀತಾದ ಹಿನ್ನಲೆ ತೀರ್ಪು ಪ್ರಕಟಗೊಂಡಿದೆ.
ಶಿರಾ ತಾಲೂಕು ಪೊಲೀಸ್ ಠಾಣೆಯಲ್ಲಿ ಹರೀಶ್ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆ ದಾಖಲಾಗಿತ್ತು. 22 ವರ್ಷದ ಹರೀಶ್ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ಈ ಹಿನ್ನಲೆ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರ ಆರೋಪಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ಕೋರ್ಟ್ ಗೆ ಪ್ರಡ್ಯೂಸ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ವಿಶೇಷ ಸರ್ಕಾರಿ ಅಭಿಯೋಜಕಿಯಾದ ಶ್ರೀಮತಿ ಆಶಾ ಕೆ.ಎಸ್. ಅವರು ವಾದ ಮಂಡಿಸಿದ್ದು, ಆರೋಪಿ ಹರೀಶ್ ವಿರುದ್ಧ ಎಲ್ಲಾ ಸಾಕ್ಷ್ಯಗಳು ದೃಢಪಡಿಸಿದರು. ಈ ವಾದ ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಆರೋಪಿಯು ತಪ್ಪಿತಸ್ಥನೆಂದು ಗುರ್ತಿಸಿ ತೀರ್ಪು ಪ್ರಕಟ ಮಾಡಿದೆ. ಈ ಹಿನ್ನಲೆಯಲ್ಲಿ ಆರೋಪಿಗೆ ಬರೋಬ್ಬರಿ 40 ವರ್ಷ ಜೈಲು ಶಿಕ್ಷೆ ಹಾಗೂ ಎರಡೂವರೆ ಲಕ್ಷ ದಂಡ ವಿಧಿಸಿದೆ. ಈ ಪ್ರಕರಣ ಸಂಬಂಧ ಶಿರಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಪ್ರಕರಣವನ್ನು ತನಿಖೆ ನಡೆಸಿ ಆರೋಪಿಗೆ ಶಿಕ್ಷೆಯಾಗುವಲ್ಲಿ ಶ್ರಮಿಸಿದ ಅಧಿಕಾರಿಗಳ ಕಾರ್ಯವನ್ನು ತುಮಕೂರು ಎಸ್ ಪಿ ಕೆ.ವಿ. ಅಶೋಕ್ ಶ್ಲಾಘಿಸಿದ್ದಾರೆ.