Namrata Gowda :
ನಮ್ರತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ನಟನೆ ಮೂಲಕ ಮಿಂಚ್ತಿದ್ದು, ತಮ್ಮ ಪ್ರತಿಭೆ, ಸೌಂದರ್ಯ, ಸರಳ ವ್ಯಕ್ತಿತ್ವದಿಂದಲೇ ಕನ್ನಡಿಗರ ಮನ ಸೆಳೆದಿದ್ದಾರೆ. ಇದೀಗ ನಮ್ರತಾ ಅವರು ಕರ್ಣ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ನಮ್ರತಾಗೆ ಸಾಮಾಜಿಕ ಜಾಲತಾಣದಲ್ಲಿ ರೋಷನ್ ಎಂಬ ವ್ಯಕ್ತಿಯಿಂದ ಕಿರುಕುಳ ಎದುರಾಗಿದೆ. ರಾಜಕಾರಣಿಗಳೊಂದಿಗೆ ಡೇಟಿಂಗ್ ಮಾಡುವಂತೆ ಒತ್ತಾಯಿಸಿದ್ದಲ್ಲದೇ ಹಣವನ್ನು ನೀಡುವುದಾಗಿ ಆಮಿಷವನ್ನು ಒಡ್ಡಿದ್ದಾನೆ.
ಇನ್ನು ನಮ್ರತಾ ಗೌಡ ಆ ವ್ಯಕ್ತಿಯ ವಿರುದ್ದ ಆಕ್ರೋಶವನ್ನು ಹೊರಹಾಕಿದ್ದು, ಸಾಕ್ಷಿ ಸಮೇತ ಸ್ಕ್ರೀನ್ ಚಾಟ್ ತೆಗೆದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ರಾಕಿ ಜಿ43 ಹೆಸರಿನಲ್ಲಿ ರೋಷನ್ ಎಂಬಾತ ಇನ್‌ಸ್ಟಾಗ್ರಾಂ ಖಾತೆಯಿಂದ ನಮ್ರತಾಗೆ ಸಂದೇಶಗಳನ್ನು ಕಳುಹಿಸಿದ್ದಾನೆ. ರೋಷನ್ ಸಾಕಷ್ಟು ರಾಜಕರಣಿಗಳ ಜೊತೆಗೆ ನಂಟಿದ್ದು, ರಾಜಕಾರಣಿಗಳ ಜೊತೆಗೆ ಡೇಟಿಂಗ್ ಮಾಡುವಂತೆ ರೋಷನ್ ನಮ್ರತಾಗೆ ಸಂದೇಶವನ್ನು ಕಳುಹಿಸಿದ್ದಾನೆ. ಅಲ್ದೇ ಆತ ನಾನು ವಿಐಪಿಗಳ ಅಡಿಯಲ್ಲಿ ಕೆಲಸ ಮಾಡ್ತಾ ಇದ್ದೇನೆ ಅಂತ ಹೇಳಿದ್ದು, ಅವರಿಗಾಗಿ ಪೇಯ್ಡ್ ಡೇಟಿಂಗ್ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್ಗೆ ಬರಲಿಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ ಎಂದಿದ್ದಾನೆ, ಇನ್ನು ನಿನ್ನ ಫೋನ್ ನಂಬರ್, ಫೋಟೋಗಳನ್ನು ಕಳುಹಿಸುವ ಅಗತ್ಯವಿಲ್ಲ. ನೀವು ಕೇಳಿದಷ್ಟು ಹಣವನ್ನು ಕೊಡಲು ಸಿದ್ದ ಇದ್ದೇವೆ. ಶೇ 200 ರಷ್ಟು ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದೂ ಬಹಿರಂಗ ಆಗುವುದಿಲ್ಲ ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ರೋಷನ್ ಎಂಬಾತ ನಟಿ ನಮ್ರತಾಗೆ 4 ಬಾರಿ ಸಂದೇಶವನ್ನು ಕಳುಹಿಸಿದ್ದಾನೆ.
ನಮ್ರತಾ ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದು, ತಮ್ಮ ಸ್ವಂತ ಬಲದಿಂದ ಚಿತ್ರ ಲೋಕದಲ್ಲಿ ಹೆಸರು ಮಾಡಿದ್ದಾರೆ. ಈ ವಿಚಾರ ನಮ್ರತಾಗೆ ಬೇಸರವನ್ನುಂಟು ಮಾಡಿದ್ದು, ಕಿಡಿಗೇಡಿ ರೋಷನ್ ಅವರಿಗೆ ತಕ್ಕ ಪಾಠ ಕಲಿಸುವುದ್ದಕ್ಕೆ ರೋಷನ್ ಮಾಡಿದ ಸಂದೇಶವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ನಟಿ ನಮ್ರತಾ ಗೌಡ ಅದನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಗೆ ಹಾಕಿ ಸಾಕಿನ್ನು ನಿಲ್ಲಿಸಿ ಎಂದಿದ್ದಾರೆ.