ಶಿರಾ: ಪ್ರಜಾ ಶಕ್ತಿ ವರದಿಯ ಫಲಶೃತಿ | ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹಾಸ್ಟೆಲ್‌ ಗೆ ಭೇಟಿನೀಡಿ ಪರಿಶೀಲನೆ

ಡಾ. ಬಿ.ಆರ್‌ ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ
ಡಾ. ಬಿ.ಆರ್‌ ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ
ತುಮಕೂರು

ಶಿರಾ:

ಶಿರಾದ ಹಾಸ್ಟೆಲ್‌ಗಳ ಚಿತ್ರಣವನ್ನು ನಿಮ್ಮ ಪ್ರಜಾಶಕ್ತಿ ಬಯಲು ಮಾಡ್ತನೇ ಬಂದಿದೆ. ಹೌದು ನೆನ್ನೆ ಅಷ್ಟೇ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಡಾ. ಬಿ.ಆರ್‌ ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಈ ಹಾಸ್ಟೆಲ್‌ ನಲ್ಲಿ ಮಕ್ಕಳಿಗೆ ಮಲಗಲು ಮಂಚಗಳಿಲ್ಲ. ಅಲ್ಲದೇ ಶುಚಿತ್ವ ಅಂತು ಇಲ್ಲಿ ಮರೀಚಿಕೆಯಾಗಿದೆ. ಜೊತೆಗೆ ಇಲ್ಲಿನ ಮಕ್ಕಳಿಗೆ ಕೊಡುವ ಚಪಾತಿಯನ್ನು ನೆಲದ ಮೇಲೆ ತಯಾರಿಸಿ ಕೊಡ್ತಾ ಇದ್ದರು. ಜೊತೆಗೆ ಇಲ್ಲಿನ ಮಕ್ಕಳಿಗೆ ತೊಂದರೆ ಕೊಡಲೆಂದೇ ಹಾಸ್ಟೆಲ್‌ನ ಆವರಣವನ್ನು ಪುಂಡರು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ ಎಂದು ನಿಮ್ಮ ಪ್ರಜಾಶಕ್ತಿ ಟಿವಿ ವರದಿಯನ್ನು ಬಿತ್ತರಿಸಿತ್ತು.

ಹೌದು ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ ವಿದ್ಯಾರ್ಥಿ ನಿಲಯಗಳು ಬಡ ದಲಿತ ಮಕ್ಕಳಿಗೆ ವರದಾನವಾಗುವ ಬದಲು ಮತ್ತಷ್ಟು ಸಮಸ್ಯೆಗಳಿಗೆ ಕಾರಣೀಭೂತವಾಗ್ತಾ ಇದೆ, ಎಂಬ ವರದಿಯನ್ನು ನೋಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಡಿಗೇರ್‌ ಮಧುಗಿರಿ ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪರವರು ಇಂದು ಹಾಸ್ಟೆಲ್‌ಗೆ ಭೇಟಿಯನ್ನು ನೀಡಿ ಪರಿಶೀಲಿಸಿದ್ದಾರೆ. ಇನ್ನು ಹಾಸ್ಟೆಲ್‌ಗಳ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಡಿಗೇರ್‌ ಹಾಗೂ ಮಧುಗಿರಿ ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ ರವರು ಸಿಬ್ಬಂದಿ ವರ್ಗಕ್ಕೆ ಬುದ್ದಿ ಮಾತನ್ನು ಹೇಳಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

 

Author:

share
No Reviews