ಶಿರಾ: ಗುಂಡಿ ಬಿದ್ದ ರಸ್ತೆಗಳು, ಕೆಟ್ಟಿರೋ ಬೀದಿ ದೀಪಗಳು | ಕಣ್ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು

ಶಿರಾ ಪಟ್ಟಣದ ರಸ್ತೆಗಳ ದುಸ್ಥಿತಿ
ಶಿರಾ ಪಟ್ಟಣದ ರಸ್ತೆಗಳ ದುಸ್ಥಿತಿ
ತುಮಕೂರು

ಶಿರಾ:

ಶಿರಾ ಪಟ್ಟಣ ತುಮಕೂರಿನಿಂದ 50 ಕಿಲೋ ಮೀಟರ್‌ ದೂರದಲ್ಲಿದ್ದು, ನಾನಾ ಕಾರ್ಖಾನೆಗಳು ತಲೆ ಎತ್ತಿದ್ದು ಬೆಳೆವಣಿಗೆಯ ಹಾದಿಯಲ್ಲಿದೆ.  ಆದರೆ ನಗರ ಸಭೆಯಲ್ಲಿ ಜನಪ್ರತಿನಿಧಿಗಳು ಇದ್ದರು ಕೂಡ ಇಲ್ಲದಂತಾಗಿದ್ದು, ಅಭಿವೃದ್ದಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿದೆ. ಅದರಲ್ಲೂ ಪ್ರಮುಖವಾಗಿ ಜನರಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕ್ತಿದ್ದಾರೆ. ಹೌದು ಶಿರಾ ಪಟ್ಟಣದ ನಾನಾ ರಸ್ತೆಗಳಲ್ಲಿ ಸಾಕಷ್ಟು ಗುಂಡಿ ಬಿದ್ದಿದ್ದು ಅಧಿಕಾರಿಗಳು ಡಾಂಬರು ಹಾಕಲು ಹಿಂದೇಟು ಹಾಕ್ತಿದ್ದಾರೆ.

ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳ ಒಂದು ಕಥೆ ಆದರೆ. ಮತ್ತೊಂದು ಕಡೆ ಬೀದಿ ದೀಪಗಳು ಇದ್ದರು ಕೂಡ ಸರಿಯಾಗಿ ವರ್ಕ್‌ ಆಗ್ತಾ ಇಲ್ಲ. ಹೌದು ನಗರಸಭೆ ವತಿಯಿಂದ 31 ವಾರ್ಡ್‌ಗಳಲ್ಲಿ ಬೀದಿ ದೀಪಗಳನ್ನು ಅಳವಡಿಕೆ ಮಾಡಲಾಗಿತ್ತು. ಆದರೆ ಬೀದಿ ದೀಪಗಳ ಸರಿಯಾದ ನಿರ್ವಹಣೆ ಕೊರೆತೆಯಿಂದಾಗಿ ಬೀದಿ ದೀಪಗಳು ಹಾಳಾಗಿ ಹೋಗಿವೆ. ಇದರಿಂದ ರಾತ್ರಿ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಲು ನಗರಸಭೆಯೇ ದಾರಿ ಮಾಡಿಕೊಟ್ಟಂತಿದೆ. ಜೊತೆಗೆ ಬೀದಿ ದೀಪಗಳ ಸಮಸ್ಯೆಯಿಂದ ಶಿರಾ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ನಿತ್ಯ ಇಲ್ಲಿ ಸಂಜೆ ಆಗ್ತಿದ್ದಂತೆ ಸಾವಿರಾರು ಮಂದಿ ಓಡಾಡುತ್ತಲೇ ಇರ್ತಾರೆ. ಆದರೆ ಬೀದಿ ದೀಪದ ಕೊರತೆಯಿಂದಾಗಿ ಪುಂಡರು ಕಳ್ಳತನದಂತಹ ಕೃತ್ಯದಲ್ಲಿ ತೊಡಗಿಕೊಳ್ತಾ ಇದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಗರಸಭೆ ಅಧ್ಯಕ್ಷರೇ ಹಂಚಿಕೊಂಡಿದ್ದಾರೆ. 

ಇನ್ನಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ದೀಪಗಳನ್ನು ಸರಿಮಾಡಿಸುವ ಜೊತೆಗೆ ರಸ್ತೆಗೆ ಡಾಂಬರು ಹಾಕಿ ಜನರನ್ನು ರಕ್ಷಿಸಬೇಕಿದೆ.

Author:

...
Editor

ManyaSoft Admin

Ads in Post
share
No Reviews