ಶಿರಾ:
ಶಿರಾ ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಹೆಂಡ್ತಿ ಸದಸ್ಯೆ ಆಗಿದ್ದು, ದರ್ಬಾರ್ ಮಾತ್ರ ಗಂಡ ನಡೆಸುತ್ತಿರೋದು ಬೆಳಕಿಗೆ ಬಂದಿದೆ. ಸರ್ಕಾರ ಬಡವರ, ಗ್ರಾಮಗಳ ಕ್ಷೇಮಾಭಿವೃದ್ದಿಗಾಗಿ ಅನೇಕ ಯೋಜನೆ ತಂದು ಅದರ ಸದುಪಯೋಗಕ್ಕಾಗಿ ಸಾಕಷ್ಟು ಅನುದಾನವನ್ನು ನೀಡುತ್ತದೆ, ಆದರೆ ಬಡವರಿಗೆ ಸೇರಬೇಕಾದ ಸೌಲಭ್ಯಗಳನ್ನು ಬಡವರಿಗೆ ಸಿಗದಂತೆ ಅಧಿಕಾರದಲ್ಲಿರೋರೆ ಮಾಡ್ತಾ ಇದ್ದು, ಬಡವರ ದುಡ್ಡನ್ನು ಹೊಡೆಯುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಸಾಕ್ಷ್ಯದಂತಾಗಿದೆ ಶಿರಾ ತಾಲೂಕಿನ ಹೊಸೂರು ಗ್ರಾಮ ಪಂಚಾಯ್ತಿಯ ಕಥೆ.
ಹೊಸೂರು ಗ್ರಾಮ ಪಂಚಾಯ್ತಿಯ ಹಾಲಿ ಸದಸ್ಯೆ ಲಕ್ಷ್ಮಮ್ಮ ಎಂಬುವವರಾಗಿದ್ದಾರೆ. ಆದರೆ ಅವರು ಹೆಸರಿಗಷ್ಟೇ ಗ್ರಾಮ ಪಂಚಾಯ್ತಿ ಸದಸ್ಯೆ ಆದರೆ ಅಧಿಕಾರವನ್ನು ಆಕೆಯ ಗಂಡ ಮೈಲಾರಪ್ಪ ನಡೆಸುತ್ತಿದ್ದಾನೆ, ಈತ ನರೇಗಾ ಯೋಜನೆ, ನೀರಾವರಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ದುರುಪಯೋಗ ಪಡೆಸಿಕೊಂಡಿದ್ದಾನೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಈತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸ್ತಾ ಇದ್ದಾರೆ. ಅಲ್ಲದೇ ಈ ಬಗ್ಗೆ ತಾಲೂಕು ಪಂಚಾಯ್ತಿ ಇಒ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗೆ ಗ್ರಾಮಸ್ಥರು ಪತ್ರ ಬರೆದಿದ್ದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.