ಗುಬ್ಬಿ:
ಆತ ಸರ್ಕಾರಿ ಶಾಲೆ ಶಿಕ್ಷಕ, ಸಮಾಜದ ಮೇಲೆ ಅತ್ಯಂತ ಕಳಕಳಿ ಇಟ್ಟುಕೊಂಡಿದ್ದಂತ ವ್ಯಕ್ತಿ, ಎರಡೂವರೆ ವರ್ಷದ ಹೆಣ್ಣು ಮಗು, ಒಂದೂವರೆ ತಿಂಗಳ ಹೆಣ್ಣು ಮಗು, ವಯಸ್ಸಾದ ತಂದೆ ತಾಯಿ, ಅತ್ತ ಮಾವನಿಗೆ ಇವರೊಬ್ಬರೇ ಆಧಾರವಾಗಿದ್ರು,. ಬೆಸ್ಕಾಂ ಮತ್ತು ಗ್ರಾಮಪಂಚಾಯ್ತಿ ನಿರ್ಲಕ್ಷ್ಯಕ್ಕೆ ಶಿಕ್ಷಕ ಬಲಿಯಾಗಿದ್ದಾನೆ.
ಹೌದು, ಹೀಗೆ ಫೋಟೊಗಳಲ್ಲಿ ಮುದ್ದುಮುದ್ದಾಗಿ ಸ್ಮೈಲ್ ಕೊಡತ್ತಿರುವವರ ಹೆಸರು ಲೋಕೇಶ್ ರಾವ್ ಅಂತ, ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಬ್ಯಾಡಗೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ರು,ಬಡತನದಲ್ಲೇ ಓದಿ ಬೆಳೆದು ಕೆಲಸಕ್ಕೆ ಸೇರಿಕೊಂಡಿದ್ರು. ಕಳೆದ ಮೂರು ವರ್ಷಗಳ ಹಿಂದಷ್ಟೇ ಮದುವೆ ಆಗಿದ್ರು. ಎರಡವರೆ ವರ್ಷದ ಹೆಣ್ಣು ಮಗು ಹಾಗೂ ಒಂದೂವರೆ ತಿಂಗಳ ಹೆಣ್ಣು ಮಗು ಕೂಡಾ ಇದೆ.. ಆದ್ರೆ ಬೆಸ್ಕಾಂ ಹಾಗೂ ನಿಟ್ಟೂರು ಗ್ರಾಮಪಂಚಾಯ್ತಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾವನ್ನಪ್ಪಿದ್ದಾರೆ.
ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಇವರ ಮನೆ ಇದೆ.ಸೋಮವಾರ ಬೆಳಗ್ಗೆ ಮನೆ ಸಮೀಪದ ಬೀದಿದೀಪ ಆರಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ..ಸ್ವಿಚ್ ಅಳವಡಿಸುವುದಕ್ಕೆ ಬದಲಾಗಿ ವೈರನ್ನೇ ಒಂದಕ್ಕೊಂದು ಸ್ಪರ್ಶಿಸಿ ಇಟ್ಟಿರುವುದೇ ಅನಾಹುತಕ್ಕೆ ಕಾರಣವಾಗಿದೆ.
ಇನ್ನು ಬೀದಿ ದೀಪಗಳಿಗೆ ಅಳವಡಿಸಿರುವ ವೈರ್‌ಗೆ ಸ್ವಿಚ್ ಹಾಕುವಂತೆ ಅನೇಕ ಬಾರಿ ಸಂಬಂಧಿಸಿದ ಬೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ.. ಬೆಸ್ಕಾಂ ಸಿಬ್ಬಂದಿಗೆ ಎಷ್ಟೇ ಕರೆ ಮಾಡಿದ್ರು ಕರೆಯನ್ನ ಸ್ವೀಕರಿಸೊದೇ ಇಲ್ಲ ಅಂತಾರೆ ಮೃತ ಶಿಕ್ಷಕನ ತಾಯಿ.
ಇಷ್ಟುಚಿಕ್ಕವಯಸ್ಸಿನಲ್ಲಿ ತನ್ನ ಗಂಡನನ್ನ ಕಳೆದುಕೊಂಡು ಆ ಹೆಣ್ಣು ಮಗಳು ಹೇಗಿರ್ತಾಳೋ..ಅದ್ಹೇಗೆ ಈ ಘಟನೆಯಿಂದ ಈಚೆ ಬರ್ತಾರೋ ಭಗವಂತನೇ ಬಲ್ಲ.. ಇನ್ನು ಗ್ರಾ.ಪಂ ಹಾಗೂ ಬೆಸ್ಕಾಂ ಇಲಾಖೆ ಮೇಲೆ ಎಫ್ ಐಆರ್ ದಾಖಲಾಗಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕಿದೆ..