ಕೊರಟಗೆರೆ :
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೊರವನಹಳ್ಳಿಯ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ 24 ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಚಿವ ಪರಮೇಶ್ವರ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಪೊಲೀಸ್ ವರೀಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ಮಂಜುನಾಥ್, ಸಿಪಿಐ ಅನಿಲ್, ತಾಲೂಕು ಪಂಚಾಯ್ತಿ ಇಓ ಅಪೂರ್ವ, ಸಣ್ಣನೀರಾವರಿ ಎಇಇ ರಮೇಶ್ ಸೇರಿ ಹಲವು ಮಂದಿ ಭಾಗಿಯಾಗಿದ್ದರು. 2026ರ ಜೂನ್ ಅಂತ್ಯದೊಳಗೆ ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ ತಾಲೂಕಿನ 243 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು.
ನಮ್ಮ ಸರ್ಕಾರ ದಿವಾಳಿ ಆಗಿದೆ ಅಂತಾ ವಿರೋಧ ಪಕ್ಷದವರು ಅಂತಾರೇ. ಈ ಬಾರಿಯ ಬಜೆಟ್ ಹೆಚ್ಚಾಗಿದ್ದು ವಿರೋಧ ಪಕ್ಷಗಳಿಗೆ ಗೋತ್ತಿಲ್ಲವೇ. ಎತ್ತಿನಹೊಳೆ ಯೋಜನೆಯ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯ ಅಭಿವೃದ್ದಿಯು ನನ್ನ ಹೆಜ್ಜೆಗುರುತು ಸಾಕ್ಷಿಯಾಗಿ ಉಳಿಯಲಿವೆ ಎಂದರು. ಬಯಲುಸೀಮೆ ರೈತರ ನೀರಾವರಿ ಬೇಡಿಕೆಯಂತೆ ನಾನು ನೀಡಿದ ಎತ್ತಿನಹೊಳೆ ಯೋಜನೆಯ ಕಾರ್ಯಗತದ ಹೆಜ್ಜೆಗುರುತು ಹಾಕಿದ್ದೇನೆ ಎಂದು ಪರಮೇಶ್ವರ್ ಹೇಳಿದರು. ಸುಮಾರು 453 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಏಪ್ರಿಲ್ 19ರಂದು ಚಾಲನೆ ನೀಡಿ ಕೊರಟಗೆರೆ ಕ್ಷೇತ್ರವನ್ನು ಅಭಿವೃದ್ದಿಯ ಪಥದತ್ತಾ ಕೊಂಡ್ಯೊಯುತ್ತೇನೆ ಎಂದರು.
ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಓ ಪ್ರಭು.ಜಿ ಮಾತನಾಡಿ, ಕೊರಟಗೆರೆ ಕ್ಷೇತ್ರದ ೧೦೪ ಕೆರೆಗಳಿಗೆ ಶಾಶ್ವತ ನೀರಾವರಿ ಯೋಜನೆಯ ಕನಸು ನನಸಾಗಲಿದೆ. ಬಯಲುಸೀಮೆ ಕೊರಟಗೆರೆ ಕ್ಷೇತ್ರದ ರೈತರ ಕನಸು ನನಸಾಗುವ ಕಾಲ ಸನಿಹ ಬಂದಿದೆ. ಗೃಹ ಸಚಿವರು ಕೊರಟಗೆರೆ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಅನುದಾನ ನೀಡಿ ಅಭಿವೃದ್ದಿಯ ಆದ್ಯತೆ ನೀಡಿದ್ದಾರೆ ಎಂದರು.