ಶಿರಾ :
ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ದಬ್ಬಾಳಿಕೆ, ಸರ್ವಾಧಿಕಾರ ಧೋರಣೆ ಮುಂದುವರೆಯುತ್ತಲೇ ಇದ್ದು, ಇಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇತ್ತೀಚೆಗೆ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು, ಸಭೆಯಲ್ಲಿ ಪಿಡಿಒ ಮಂಜುನಾಥ್ ಪಂಚಾಯ್ತಿ ಸದಸ್ಯರ ನಡುವೆ ತಾರತಮ್ಯ ತೋರುತ್ತಿದ್ದು, ತಮಗೆ ಬೇಕಾದ ಸದಸ್ಯರ ವಾರ್ಡ್‌ಗೆ ಮಾತ್ರ ಅನುದಾನವನ್ನು ಹಂಚಿಕೆ ಮಾಡ್ತಾ ಇದ್ದರಂತೆ. ಅಲ್ಲದೇ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದು ಇದನ್ನು ಪ್ರಶ್ನೆ ಮಾಡಿದಕ್ಕೆ ಸಭೆಯಿಂದ ಸದಸ್ಯರನ್ನು ಹೊರ ಕಳುಹಿಸಿ, ತನಗೆ ಬೇಕಾದವರನ್ನು ಕರೆಸಿ ಸಭೆ ಮಾಡಿದ್ದರಂತೆ, ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಮಾಡಿತ್ತು, ವರದಿ ಬಳಿಕ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿ ಜಯರಾಂ ವಿರುದ್ಧ ಹಲ್ಲೆ ಮಾಡಿರೋ ಆರೋಪ ಮಾಡಲಾಗಿದೆ.
ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಸರ್ವಾಧಿಕಾರಿ ಧೋರಣೆ ವಿರುದ್ಧ ಧ್ವನಿ ಎತ್ತಿದ್ದ ಸದಸ್ಯೆ ಕಾವೇರಿ ಮೇಲೆ ಅಧ್ಯಕ್ಷೆ ರೂಪಶ್ರೀ ಗಂಡ ಜಯರಾಂ ಹಲ್ಲೆ ಮಾಡಿದ್ದಾನೆ. ಅಧ್ಯಕ್ಷೆ ರೂಪಶ್ರೀ ಗಂಡ ಜಯರಾಂ ಅವರು ಪಿಡಿಒ ಮಂಜುನಾಥ್ ಕುಮ್ಮಕ್ಕಿನಿಂದ ಸದಸ್ಯೆ ಕಾವೇರಮ್ಮನ ಕಪಾಳಕ್ಕೆ ಹಾಗೂ ಬೆನ್ನಿಗೆ ಹೊಡೆದು ಹಲ್ಲೆ ಮಾಡಿದ್ದಾನೆ ಎಂದು ಕಾವೇರಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಶಿರಾ ಹಾಗೂ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ಹಲ್ಲೆಗೊಳಗಾದ ಸದಸ್ಯೆ ಕಾವೇರಿ ಅವರೇ ದೂರು ಕೊಟ್ಟಿದ್ದು, ಅಧ್ಯಕ್ಷೆ ಪತಿ ಜಯರಾಂಗೆ ಯಾವುದೇ ಅಧಿಕಾರ ಇಲ್ಲದಿದ್ರು ಗ್ರಾಮ ಪಂಚಾಯ್ತಿ ಕಚೇರಿಗೆ ಬಂದು ಹಲ್ಲೆ ಮಾಡಿದ್ದಾನೆ. ನನ್ನ ಕೆನ್ನೆಗೆ ಹೊಡೆದಿದ್ದಲ್ಲದೇ, ಬೆನ್ನಿಗೆ ಬಲವಾಗಿ ಗುದ್ದಿ, ಜಾತಿ ನಿಂದನೆ ಮಾಡಿದ್ದಾನೆ. ಅಲ್ಲದೇ ನನ್ನ ಮೇಲೆ ಕೊಲೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ನನ್ನ ಮೇಲೆ ಹಲ್ಲೆ ಮಾಡಿದ್ದ ಅಧ್ಯಕ್ಷೆಯ ಪತಿ ಜಯರಾಂ ಹಾಗೂ ಹಾಲಿ ಸದಸ್ಯ ಉಮೇಶ್ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾವೇರಮ್ಮ ಆಗ್ರಹಿಸಿದ್ದಾರೆ.
ಇನ್ನು ಸದಸ್ಯೆ ಮೇಲೆ ಹಲ್ಲೆ ಮಾಡಿರೋ ಪ್ರಕರಣದ ಬಗ್ಗೆ ಸ್ಪಷ್ಟನೆ ಕೇಳಲು ಅಧ್ಯಕ್ಷೆಯ ಪತಿ ಜಯರಾಂಗೆ ಪ್ರಜಾಶಕ್ತಿ ವರದಿಗಾರರೇ ಸ್ವತಃ ಕಾಲ್ ಮಾಡಿದ್ದಕ್ಕೆ, ನಾನು ಹಲ್ಲೆ ಮಾಡಿಲ್ಲ ನನ್ನ ಮೇಲೆಯೇ ಅವರು ಹಲ್ಲೆ ಮಾಡಿದ್ದಾನೆ ಅಂತಾ ಕಾವೇರಿ ಮೇಲೆ ಆರೋಪವನ್ನು ಹೊರಿಸಿದ್ದಾರೆ.
ಹಲ್ಲೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿ ಒಂದುಕಡೆ ದೂರು ನೀಡಿದರೆ, ಸದಸ್ಯೆ ಕಾವೇರಿ ಕೂಡ ದೂರು ದಾಖಲಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕಿದೆ. ಆದರೆ ಪಿಡಿಒ ಕುಮ್ಮಕ್ಕನಿಂದ ಪೊಲೀಸರು ಸದಸ್ಯೆ ಮೇಲೆಯೇ ದಬ್ಬಾಳಿಕೆ ತೋರುತ್ತಾರಾ ಎಂದು ಕಾದು ನೋಡಬೇಕಿದೆ.