ಶಿರಾ:
ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಲಕ್ಷ ವೆಚ್ಚದ ಸ್ವಚ್ಛ ಸಂಕೀರ್ಣ, ಲಕ್ಷ ಮೌಲ್ಯದ ಕಸ ವಿಲೇವಾರಿ ವಾಹನ, ಒಣ ಕಸ, ಹಸಿ ತ್ಯಾಜ್ಯ ಸಂಗ್ರಹಣೆಗೆ ಪ್ರತಿ ಮನೆಗಳಿಗೆ ಬಕೆಟ್‌ಗಳನ್ನು ಒದಗಿಸಿ ಸ್ವಚ್ಛತೆಯಡೆಗೆ ಹೆಜ್ಜೆ ಇಡಲಾಗಿದೆ. ಆದರೆ ಲಕ್ಷ ವೆಚ್ಚದ ಈ ಯೋಜನೆಗೆ ನಿರ್ವಹಣೆಯೇ ಸವಾಲಾಗಿದೆ. ಸೂಕ್ತ ಅನುದಾನದ ಕೊರತೆಯಿಂದ, ಶಿರಾ ತಾಲ್ಲೂಕಿನ ಚಂಗಾವರ ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಯೋಜನೆಗಳಿಗೂ ಇದೇ ಪರಿಸ್ಥಿತಿ ಬಂದೊದಗಿದೆ. ಗೌಡಗೆರೆ ಹೋಬಳಿ ವ್ಯಾಪ್ತಿಯ ಚಂಗಾವರ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ 8 ರಿಂದ 10 ತಿಂಗಳು ಕಳೆದ್ರೂ ವೇತನವೇ ಆಗಿಲ್ವಂತೆ.
ಸದ್ಯ ಗ್ರಾಮ ಪಂಚಾಯಿತಿಗಳ ಬಳಿ ಲಭ್ಯವಿರುವ ಅನುದಾನದಲ್ಲಿ ತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡುವುದು ದುಸ್ತರವಾಗಿದೆ. ನೀರು, ವಿದ್ಯುತ್, ಜಾಡಮಾಲಿಗಳಿಗೆ ವೇತನ ವೆಚ್ಚ ಭರಿಸುವುದೇ ಕಷ್ಟವಾಗಿದೆ ಎಂಬುದು ಗ್ರಾಮಸ್ಥರು ಅಳಲು.
ಆರು ತಿಂಗಳು ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯ ವೆಚ್ಚವನ್ನು ಗ್ರಾಮ ಪಂಚಾಯಿತಿಯ ಸಂಪನ್ಮೂಲಗಳಿಂದಲೇ ಭರಿಸಲಾಗಿತ್ತಂತೆ. 15ನೇ ಹಣಕಾಸು ಯೋಜನೆಯ ಅನುದಾನವನ್ನು ಇದಕ್ಕೆ ಬಳಸಿಕೊಳ್ಳುವ ಸುತ್ತೋಲೆ ಇದೆಯಾದರೂ, ಅನುದಾನವು ಗ್ರಾಮದ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುತ್, ವೇತನಗಳಿಗೇ ಸಾಲದು ಎಂಬ ಸ್ಥಿತಿ ಇದೆಯಂತೆ. ಈ ಬಗ್ಗೆ ಇಲ್ಲಿಯ ಸ್ವಚ್ಚತಾ ಸಿಬ್ಬಂದಿ ವರ್ಗ ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ಗ್ರಾಮವನ್ನು ಶುಚಿಗೊಳಿಸುವ ಕಾರ್ಯ ಮಾಡುವ ನಮಗೆ 8ರಿಂದ 10 ತಿಂಗಳು ಕಳೆದರೂ ವೇತನ ನೀಡಿಲ್ಲ. ನಮಗೆ ಆರೋಗ್ಯ ಸರಿಯಾಗಿಲ್ಲ ಎಂದರೆ ಆಸ್ಪತ್ರೆಗೆ ಹೋಗೋದಕ್ಕೂ ನಯಾಪೈಸೆ ಇಲ್ಲ, ಕಿರಾಣಿ ಅಂಗಡಿಯಲ್ಲಿ ಸಾಲ ಹಾಗೇ ಇದೆ. ಹಬ್ಬ ಹರಿದಿನ ಮಾಡೋದಕ್ಕೂ ಆಗ್ತಿಲ್ಲ ಅಂತಾ ದುಖಃ ತೋಡಿಕೊಂಡಿದ್ದಾರೆ.
ಇನ್ನು ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ವಿಲೇವಾರಿ ವಾಹನಗಳಿಗಾಗಿ ವಾರ್ಷಿಕ ಹತ್ತಾರು ಲಕ್ಷ ರೂ. ವೆಚ್ಚದ ಬಿಲ್ ಬರೆಯುತ್ತಿರುವ ಬೆನ್ನಲ್ಲೇ, ಬಹುತೇಕ ಸಂಸ್ಥೆಗಳ ಘನತ್ಯಾಜ್ಯ ನಿರ್ವಹಣೆ ವಾಹನಗಳಿಗೆ ಅಧಿಕೃತ ಪರವಾನಗಿಯೇ ಇಲ್ಲ ಎನ್ನುವ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯ್ತಿಗಳು ನೋಂದಣಿ ಇಲ್ಲದ ವಾಹನಗಳಿಂದ ಕಸ ವಿಲೇವಾರಿ ನಡೆಸುತ್ತಿವೆಯಂತೆ.
ಒಟ್ಟಿನಲ್ಲಿ ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವ ಪೌರಕಾರ್ಮಿಕರಿಗೆ ಎಂಟತ್ತು ತಿಂಗಳಿನಿಂದ ವೇತನೇ ಪಾವತಿಯಾಗಿಲ್ವಂತೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ, ಪೌರಕಾರ್ಮಿಕರಿಗೆ ಸಂಬಳ ಪಾವತಿಯಾಗುವಂತೆ ಮಾಡಬೇಕಿದೆ.