ಶಿರಾ:
ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಲಿ ಅಂತಾ ಶಾಲೆಗೆ ಕಳುಹಿಸ್ತಾರೆ. ಆದರೆ ಮಕ್ಕಳ ಕೈಯಲ್ಲಿ ನೀರು ತರಿಸೋದು, ಶಾಲಾ ಆವರಣದಲ್ಲಿ ಇರೋ ಕಸವನ್ನು ಪಂಚಾಯ್ತಿ ಕಚೇರಿ ಆವರಣದಲ್ಲಿರೋ ಕಸ ವಿಲೇವಾರಿ ವಾಹನಕ್ಕೆ ಹಾಕಿಸುವ ಕೆಲಸವನ್ನು ಇಲ್ಲಿನ ಶಿಕ್ಷಕರು ಮಾಡಿಸಿರೋ ಅಮಾನವೀಯ ಘಟನೆ ಶಿರಾ ತಾಲೂಕಿನ ಬೇವಿನಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಅಲ್ಲದೇ ಶಾಲೆಗೆ ಹೊಂದಿಕೊಂಡಿರೋ ರಸ್ತೆ ಮುಂದೆ ವಾಹನಗಳು ಸಂಚರಿಸ್ತಾ ಇದ್ದು, ಅನಾಹುತ ಆದರೆ ಯಾರು ಹೊಣೆ ಎಂಬ ಪ್ರಶ್ನೆ ಪೋಷಕರಲ್ಲಿ ಮೂಡ್ತಿದೆ. ಇಷ್ಟೇಅಲ್ಲದೇ ಶಾಲೆಯಲ್ಲಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಇಲ್ಲದೇ ಮಕ್ಕಳ ಕೈಯಲ್ಲೇ ಕುಡಿಯೋ ನೀರು ತರಿಸ್ತಾ ಇದಾರೆ.
ಶಾಲೆಗೆ ಬಂದ ಮಕ್ಕಳಿಂದ ನಿತ್ಯ ಹೀಗೆ ಶಿಕ್ಷಕರು ನೀರು ತರೋ ಕೆಲಸ ಮಾಡಿಸುತ್ತಿದ್ದು, ಸರತಿ ಪ್ರಕಾರವಾಗಿ ಕುಡಿಯುವ ನೀರು ತರಲೇಬೇಕಂತೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಇನ್ನಾದರೂ ಶಿಕ್ಷಕರ ಈ ವರ್ತನೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.