MADHUGIRI : ಅಪಘಾತವಾಗಿ 11 ವರ್ಷಗಳ ಬಳಿಕ ಶಿಕ್ಷೆ ಪ್ರಕಟ

ಮಧುಗಿರಿ ನ್ಯಾಯಾಲಯ
ಮಧುಗಿರಿ ನ್ಯಾಯಾಲಯ
ತುಮಕೂರು

ಮಧುಗಿರಿ: 

ಡ್ರೈವಿಂಗ್ಲೈಸನ್ಸ್ಇಲ್ಲದೇ ಲಾರಿಯೊಂದು ಚಲಾಯಿಸಿ ಬೈಕ್ಸವಾರನ ಸಾವಿಗೆ ಕಾರಣರಾಗಿದ್ದ ಲಾರಿ ಚಾಲಕ ಹಾಗೂ ಮತ್ತೋರ್ವನಿಗೆ ಮಧುಗಿರಿಯ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದೆ. ಅಪಘಾತಕ್ಕೆ ಕಾರಣವಾಗಿದ್ದವನಿಗೆ 14,500 ರೂಪಾಯಿ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಇನ್ನು ಈ ತೀರ್ಪನ್ನು ಬರೋಬ್ಬರಿ 11 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ.

ಮಧುಗಿರಿ ತಾಲೂಕಿನ ಕೋಡಿಗೇನಹಳ್ಳಿ ಹೋಬಳಿಯ ಕೊಡಿಗೇಹಳ್ಳಿ- ಮೈದನಹಳ್ಳಿ ರಸ್ತೆ ಮಾರ್ಗದಲ್ಲಿ  2014ರ ಜೂನ್‌ 24 ರಂದು ಆರೋಪಿಯಾದ ಗಣಿ ಅಲಿಯಾಸ್ಗಣೇಶ್ಎಂಬ ಲಾರಿ ಚಾಲಕ ಡಿಎಲ್ಇಲ್ಲದೇ ಲಾರಿ ಚಲಾಯಿಸಿದ್ದು, ಅಜಾಗುರಕತೆಯಿಂದ ಹಾಗೂ ಅತಿ ವೇಗದಿಂದ ಬಂದ ಲಾರಿ ಸ್ಕೂಟರ್ಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಬೈಕ್ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ.  ಅಲ್ದೇ ಬೈಕ್ನ ಹಿಂಬದಿ ಕುಳಿತಿದ್ದವಿಗೂ ಕೂಡ ಗಂಭೀರ ಗಾಯಗಳಾಗಿತ್ತು. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ದೇ ಅಂದಿನ ತನಿಖಾಧಿಕಾರಿ ಗಿರೀಶ್ನಾಯಕ್. ಸಿ ಅವ್ರು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ರು, ಇನ್ನು ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ಬಾಬು ವಾದ ಮಂಡಿಸಿದ್ರು. ಅಲ್ದೇ 1ನೇ ಆರೋಪಿಯ ವಿರುದ್ದ .ಎಂ.ವಿ ಕಾಯಿದೆ ರೀತಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು, ಇದೀಗ 11 ವರ್ಷಗಳ ಬಳಿಕ ಈ ಪ್ರಕರಣಕ್ಕೆ ತೀರ್ಪು ಸಿಕ್ಕಿದ್ದು, ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Author:

share
No Reviews