IPL 2025: ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯ ಮೂರನೇ ಪಂದ್ಯ

ಮೊದಲ 2 ಪಂದ್ಯ ಗೆದ್ದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​ನಲ್ಲಿ ಶುಭಾರಂಭ ಮಾಡಿದೆ. 3ನೇ ಪಂದ್ಯವನ್ನಾಡಲು ಬೆಂಗಳೂರಿಗೆ ಬಂದಿರುವ ಆರ್​​ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ. ನಾಳೆ ಗುಜರಾತ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 3ನೇ ಪಂದ್ಯವನ್ನು ಆಡಲಿದೆ.

ಸತತ ಎರಡು ಪಂದ್ಯಗಳನ್ನು ಗೆದ್ದು 2025 ರ ಐಪಿಎಲ್‌ನಲ್ಲಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತನ್ನ ತವರಿನತ್ತ ಪ್ರಯಾಣ ಬೆಳೆಸಿದೆ. ಆಡಿರುವ ಮೊದಲೆರಡು ಪಂದ್ಯಗಳನ್ನು ತವರಿನಿಂದ ಹೊರಗೆ ಆಡಿದ್ದ ಆರ್​ಸಿಬಿ, ಮೊದಲ ಪಂದ್ಯವನ್ನು ಕೆಕೆಆರ್ ವಿರುದ್ಧ ಅದರ ತವರು ನೆಲವಾದ ಕೋಲ್ಕತ್ತಾದಲ್ಲಿ ಆಡಿತ್ತು. ಆ ಬಳಿಕ ತನ್ನ ಎರಡನೇ ಪಂದ್ಯವನ್ನು ಸಿಎಸ್​ಕೆ ವಿರುದ್ಧ ಅದರ ತವರು ನೆಲವಾದ ಚೆನ್ನೈನಲ್ಲಿ ಆಡಿತ್ತು. ಇದೀಗ ತನ್ನ ಮೂರನೇ ಪಂದ್ಯಕ್ಕೆ ಸಜ್ಜಾಗಿರುವ ಆರ್​ಸಿಬಿ ತನ್ನ ತವರು ನೆಲವಾದ ಬೆಂಗಳೂರಿನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಗುಜರಾತ್ ಟೈಟನ್ಸ್ ವಿರುದ್ಧ ಆರ್​​ಸಿಬಿ ಸೆಣಸಾಟ ನಡೆಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7.30 ರಿಂದ ಪಂದ್ಯ ಆರಂಭವಾಗಲಿದೆ. ಅದಕ್ಕಾಗಿ ಆರ್​ಸಿಬಿ ಭರ್ಜರಿ ತಯಾರಿ ನಡೆಸಿದೆ. ಎರಡು ಪಂದ್ಯಗಳನ್ನು ಆಡಿರುವ ಆರ್​ಸಿಬಿ ಎರಡಲ್ಲೂ ಗೆದ್ದುಕೊಂಡಿರುವ ಆರ್​ಸಿಬಿ ಪಾಯಿಂಟ್ಸ್​ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಒಂದು ಪಂದ್ಯದಲ್ಲಿ ಸೋತು, ಇನ್ನೊಂದು ಪಂದ್ಯದಲ್ಲಿ ಗೆದ್ದಿರುವ ಗುಜರಾತ್ ಟೈಟನ್ಸ್ ಪಾಯಿಂಟ್ಸ್​ ಟೇಬಲ್​​ನಲ್ಲಿ 4ನೇ ಸ್ಥಾನದಲ್ಲಿದೆ.

 

Author:

...
Sub Editor

ManyaSoft Admin

share
No Reviews