ಮಧುಗಿರಿ:
ತುಮುಲ್ ಚುನಾವಣೆ ಬಗ್ಗೆ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹಾಗೂ ತುಮುಲ್ ಅಧ್ಯಕ್ಷ ಹೆಚ್.ವಿ ವೆಂಕಟೇಶ್ ಪರಸ್ಪರ ಕೊಂಡಾಡಿಕೊಂಡಿದ್ದಾರೆ. ಮಧುಗಿರಿ ಪಟ್ಟಣದ ಹಾಲು ಶಿಥಲಿಕರಣ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹಾಗೂ ತುಮುಲ್ ಅಧ್ಯಕ್ಷ ಹೆಚ್.ವಿ ವೆಂಕಟೇಶ್ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ರಾಜೇಂದ್ರ ರಾಜಣ್ಣ, ಪಾವಗಡ ಶಾಸಕ ಹೆಚ್. ವಿ ವೆಂಕಟೇಶ್ ಅವರಿಗೆ ತುಮುಲ್ ಅಧ್ಯಕ್ಷ ಪಟ್ಟ ಒಲಿದಿದ್ದು ಜಾಕ್ಫಾಟ್ ಆಗಿದೆ ಎಂದು ಕೊಂಡಾಡಿದ್ರು.
ಇನ್ನು ಈ ವೇಳೆ ಮಾತನಾಡಿದ ಹೆಚ್.ವಿ ವೆಂಕಟೇಶ್, ತುಮುಲ್ ಅಧ್ಯಕ್ಷ ಸ್ಥಾನದ ಆಕ್ಷಾಂಕ್ಷಿ ನಾನು ಆಗಿರಲಿಲ್ಲ. ಆದ್ರೆ ಮುಖ್ಯಮಂತ್ರಿಗಳು , ಸಹಕಾರ ಸಚಿವರು , ಗೃಹ ಸಚಿವರು ನನ್ನನ್ನು ಈ ಸ್ಥಾನಕ್ಕೆ ಅಧ್ಯಕ್ಷನಾಗಿ ಮಾಡಿದ್ದಾರೆ.ಈ ಕಾರ್ಯಕ್ರಮಕ್ಕೆ ನನ್ನರಾಜಕೀಯ ಗುರುಗಳು ಬರಬೇಕಿತ್ತು ನಾನು ಅಧ್ಯಕ್ಷನಾದ ನಂತರ ಇದುವರೆಗೂ ಅವರೊಂದಿಗೆ ವೇದಿಕೆ ಜೊತೆಯಲ್ಲಿ ಕೂತಿಲ್ಲ ಮುಂದಿನ ದಿನಗಳಲ್ಲಿ ಅವರ ಜೊತೆ ವೇದಿಕೆಯಲ್ಲಿ ಕೂರಬೇಕೆಂಬ ಆಸೆ ಇದೆ ಎಂದು ಹೇಳಿದ್ರು.