ರಾಯಚೂರು :
ಸಿಡಿಲು ಬಡಿದು ಬೊಲೆರೋ ವಾಹನವೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಸೋಮನಮರಡಿ ಗ್ರಾಮದ ಹನುಮಂತರಾಯ ಗಣಜಲಿ ಎಂಬುವರಿಗೆ ಸೇರಿದ ಬೊಲೆರೋ ವಾಹನ ಬೆಂಕಿಗೆ ಆಹುತಿಯಾಗಿದೆ.
ಸಿಡಿಲು ಮೊದಲು ತೆಂಗಿನ ಮರಕ್ಕೆ ಬಿದ್ದು, ಅದರ ಕಿಡಿ ಪಕ್ಕದ ಹುಲ್ಲಿನ ಬಣವೆಗೆ ಹಾರಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ತೆಂಗಿನ ಮರದ ಕೆಳಗೆ ನಿಲ್ಲಿಸಿದ್ದ ಬೊಲೆರೋ ವಾಹನಕ್ಕೂ ಬೆಂಕಿ ತಗುಲಿ, ಬೆಂಕಿಯ ರಭಸಕ್ಕೆ ಬೊಲೆರೋ ವಾಹನ ಸುಟ್ಟು ಭಸ್ಮವಾಗಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.