ಚಿಕ್ಕಬಳ್ಳಾಪುರ:
ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಅಪ್ಪು ಪುತ್ಥಳಿಗೆ ಇದೀಗ ಕಂಟಕ ಎದುರಾಗಿದೆ. ನಗರದ 4ನೇ ವಾರ್ಡ್ ನ ಪ್ರಶಾಂತನಗರದಲ್ಲಿ ನಿರ್ಮಿಸಲಾಗಿದ್ದ ಅಪ್ಪು ಪುತ್ಥಳಿಯನ್ನ ಕಿಡಿಗೇಡಿಗಳು ತೆರವು ಮಾಡಲು ಸಂಚು ರೂಪಿಸ್ತಿದ್ದಾರೆ ಅಂತಾ ಅಪ್ಪು ಅಭಿಮಾನಿಗಳು ಆರೋಪಿಸ್ತಾ ಇದಾರೆ.
ಕರ್ನಾಟಕ ಪುಲಿಕೇಶಿ ಸಂಘದಿಂದ ಕೆ.ವಿ.ಟ್ರಸ್ಟ್ ನ ಅಧ್ಯಕ್ಷರಾದ ಕೆ.ವಿ.ನವೀನ್, ಕಿರಣ್ ಹಾಗೂ ನಗರಸಭಾ ಅಧ್ಯಕ್ಷರಾದ ಗಜೇಂದ್ರ ಅವರ ನೇತೃತ್ವದಲ್ಲಿ ಅಪ್ಪು ಪುತ್ಥಳಿಯನ್ನ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದ್ರೀಗ ಈ ಪುತ್ಥಳಿ ತೆರವಿಗೆ ಪಿತೂರಿ ನಡಿತಿದೆ ಅಂತ ಕರ್ನಾಟಕ ಪುಲಿಕೇಶಿ ಸಂಘದ ಕಾರ್ಯಕರ್ತರು ಆರೋಪಿಸಿದ್ದಾರೆ.
ಇನ್ನು ಚಿಕ್ಕಬಳ್ಳಾಪುರ ಡಾ.ಪುನೀತ್ ರಾಜ್ ಕುಮಾರ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶಿಲ್ಪಾ ಗೌಡ ಮಾತನಾಡಿ ಅಪ್ಪು ಪುತ್ಥಳಿಯನ್ನ ಕಾಣದ ಕೈಗಳು ತೆರವು ಮಾಡಲು ಕುತಂತ್ರ ರೂಪಿಸ್ತಾ ಇದ್ದು, ಯಾರೀ ಈ ಕೆಲಸಾನ ಮಾಡ್ಬೇಕು ಅಂತ ಇದಾರೋ ಅವ್ರು ಮೊದಲು ಚಿಕ್ಕಬಳ್ಳಾಪುರದಲ್ಲಿ ಮಾಡಬೇಕಾದ ಕೆಲಸಗಳು ತುಂಬಾ ಇದೆ. ಮೊದ್ಲು ಅದನ್ನ ಮಾಡಿ ಎಂದರು. ಅಪ್ಪು ಪುತ್ಥಳಿಯನ್ನ ತೆರವು ಮಾಡಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಅಂತಾ ಎಚ್ಚರಿಕೆ ನೀಡಿದ್ರು.
ಒಟ್ಟಿನಲ್ಲಿ ಅಪ್ಪು ಹುಟ್ಟುಹಬ್ಬದಂದೇ ಪ್ರತಿಷ್ಠಾಪಿಸಲ್ಪಟ್ಟಿದ್ದ ಅಪ್ಪು ಪುತ್ಥಳಿಗೆ ಇದೀಗ ಕಂಟಕ ಎದುರಾಗಿದ್ದು, ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.