ಆನಂದ್ ಗುರೂಜಿಗೆ ದಿವ್ಯಾ ವಸಂತ್ ಬ್ಲ್ಯಾಕ್ಮೇಲ್ ಮಾಡಿದ್ರಾ..?

ಖ್ಯಾತ ಜ್ಯೋತಿಷಿ ಮಮಹರ್ಷಿ ಆನಂದ್ ಗುರೂಜಿಗೆ ಬ್ಲ್ಯಾಕ್ಮೇಲ್ ಮಾಡಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಪ್ರಕರಣದಲ್ಲಿ ದಿವ್ಯಾ ವಸಂತ್ ಮತ್ತು ಕೃಷ್ಣಮೂರ್ತಿ ವಿರುದ್ಧ ಆರೋಪ ಉಂಟಾಗಿದೆ.

ಆನಂದ್ ಗುರೂಜಿ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಆರೋಪಿ ಗ್ಯಾಂಗ್ ಅಶ್ಲೀಲ ವಿಡಿಯೋ ಬಿಡುಗಡೆ ಮಾಡುವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ, ಗುರೂಜಿ ತಕ್ಷಣವೇ ಪೊಲೀಸರ ಬಳಿ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 18, 2024ರಂದು ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆರೋಪಿ ನಂ.1 ಕೃಷ್ಣಮೂರ್ತಿ ಮತ್ತು ಆರೋಪಿ ನಂ.2 ದಿವ್ಯಾ ವಸಂತ್ ಎನ್ನಲಾಗಿದೆ. ಇದೀಗ ಬಂಧನದ ಭೀತಿಯಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಬಂಧನ ತಪ್ಪಿಸಲು ಇಬ್ಬರೂ ಕೇರಳದ ಕಡೆಗೆ ತಲೆಮರೆಸಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಆನಂದ್ ಗುರೂಜಿಗೆ ಬ್ಲ್ಯಾಕ್ಮೇಲ್ ಮಾಡುವ ಮೂಲಕ ಹಣಕ್ಕೆ ಬೇಡಿಕೆ ಇಟ್ಟುಕೊಂಡಿರುವ ಆಡಿಯೋಗಳು ವೈರಲ್ ಆಗಿದ್ದು, ಗುರೂಜಿ ಆಡಿಯೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯೂಟ್ಯೂಬ್ ಚಾನೆಲ್ 'ಸಾಮ್ರಾಟ್ ಟಿವಿ' ಸೇರಿದಂತೆ ಇನ್ನೂ ಕೆಲವು ಮೀಡಿಯಾ ಚಾನೆಲ್‌ಗಳಲ್ಲಿ ಆನಂದ್ ಗುರೂಜಿಯ ವಿರುದ್ಧ ಚಾರಿತ್ರ್ಯ ಹತ್ತುವ ಧೋರಣೆಯ ಮಾನಹಾನಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ. ಆನಂದ್ ಗುರೂಜಿ ತಮ್ಮ ಆಶ್ರಮವು ಸರ್ಕಾರಿ ಭೂಮಿಯಲ್ಲಿ ಇದೆ ಎಂದು ತಪ್ಪು ಮಾಹಿತಿ ನೀಡಿದಂತೆ ಬ್ಲ್ಯಾಕ್ಮೇಲ್ ಆಗಿದ್ದಾರೆ. ಜೊತೆಗೆ ಮಹಿಳೆಯರೊಂದಿಗೆ ಫೇಕ್ ವಿಡಿಯೋ ಪ್ರಸಾರ ಮಾಡುವ ಬೆದರಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಿದೆ.

ಕಳದೆ ವರ್ಷವೂ ದಿವ್ಯಾ ವಸಂತ್ ವಿರುದ್ಧ ಮಸಾಜ್ ಪಾರ್ಲರ್ ನಲ್ಲಿ ಹಣ ಸುಲಿಗೆ ಪ್ರಕರಣದಲ್ಲಿ ಬಂಧನವಾಗಿತ್ತು. ಈಗ ಮತ್ತೆ ಬ್ಲ್ಯಾಕ್ಮೇಲ್ ಪ್ರಕರಣದಲ್ಲಿ ತಲೆಎತ್ತಿದಿದ್ದಾರೆ. ಈ ಘಟನೆಯು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

Author:

...
Keerthana J

Copy Editor

prajashakthi tv

share
No Reviews