ಮೈಸೂರು:
ರಾಜಕೀಯ ಒತ್ತಡದ ನಡುವೆಯೂ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ 63ನೇ ಹುಟ್ಟು ಹಬ್ಬವನ್ನು ಕಬಿನಿ ಹಿನ್ನೀರಿನ ಸುಂದರ ನೈಸರ್ಗಿಕ ವಾತಾವರಣದಲ್ಲಿ ಕುಟುಂಬದ ಸದಸ್ಯರೊಂದಿಗೆ ಆಚರಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ಕ ಅವರು ಇಂದು ಮೈಸೂರಿನ ಕಬಿನಿ ನಕಪುರದ ಬಂಡೆ ಖ್ಯಾತಿಯ ಡಿಕೆ ಶಿವಕುಮಾರ್ ರಾಜಕೀಯ ಒತ್ತಡದಿಂದ ದೂರವಿದ್ದು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಜನಪ್ರಿಯ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರಿಗೆ ಬೆಂಬಲಿಗರಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆದರೆ ಈ ವರ್ಷ ಭಯೋತ್ಪಾದನೆ ವಿರುದ್ದ ಭಾರತೀಯ ಯೋಧರು ತಮ್ಮ ಪ್ರಾಣವನ್ನು ಪಟಕ್ಕಿಟ್ಟು ಹೋರಾಡುತ್ತಿರುವುದರಿಂದ ಹುಟ್ಟು ಹಬ್ಬ ಆಚರಿಸದಿರಲು ತನ್ನ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದರು. ಇನ್ನು ಮುಂದಿನ ಹುಟ್ಟುಹಬ್ಬದ ವೇಳೆಗೆ ಡಿಕೆ ಶಿವಕುಮಾರ್ ಗೆ ರಾಜಕೀಯದಲ್ಲಿ ಉನ್ನತ ಹುದ್ದೆ ಸಿಗಲೆಂದು ಅಭಿಮಾನಿಗಳು ಆಶಿಸಿದ್ದಾರೆ. ಪಕ್ಷದ ಆಂತರಿಕ ರಾಜಕೀಯ ನಡುವೆಯೂ ರಾಜ್ಯ ರಾಜಕಾರಣದಲ್ಲಿ ಮುಂದಿನ ಹಂತಗಳತ್ತ ಹೆಜ್ಜೆ ಇಡಲು ಡಿಕೆ ಶಿವಕುಮಾರ್ ಅವರು ಸಜ್ಜಾಗಿದ್ದು, ಸದ್ಯಕ್ಕೆ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಅವರ ಕುಟುಂಬದ ಜೊತೆ ಕಬಿನಿಗೆ ಭೇಟಿ ನೀಡಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ʼಈ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಕಬಿನಿಯಲ್ಲಿ ಕಾಲ ಕಳೆಯುವ ಮೂಲಕ ಆಚರಿಸಿದೆ. ಪ್ರಕೃತಿಯೊಂದಿಗೆ ಒಂದಾದ ಭಾವ, ಕಬಿನಿಯ ಸೌಂದರ್ಯ, ವನ್ಯಸಂಪತ್ತನ್ನು ಕಣ್ತುಂಬಿಕೊಂಡು, ಪ್ರಶಾಂತವಾದ ಜಗತ್ತಿಗೆ ಕಾಲಿಟ್ಟ ಅನುಭವವಾಯಿತುʼ ಎಂದು ಬರೆದುಕೊಂಡಿದ್ದಾರೆ.