ಚಿಕ್ಕಬಳ್ಳಾಪುರ:
ಭಾರತೀಯ ವಕೀಲ ಪರಿಷತ್ ನ ಸದಸ್ಯ, ಹಿರಿಯ ವಕೀಲ ವೈ.ಆರ್. ಸದಾಶಿವರೆಡ್ಡಿ ಮೇಲೆ ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಚಿಕ್ಕಬಳ್ಳಾಪುರದ ವಕೀಲರ ಸಂಘದಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಕಳೆದ ಏಪ್ರಿಲ್ 15 ರಂದು ವೈ.ಆರ್. ಸದಾಶಿವರೆಡ್ಡಿಯವರ ಕಛೇರಿಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ರು. ಈ ವಿಚಾರವಾಗಿ ರಾಜ್ಯಾದ್ಯಂತ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ.ಅದರಂತೆ ಇಂದು ಚಿಕ್ಕಬಳ್ಳಾಪುರದ ವಕೀಲರ ಸಂಘದಿಂದ ನಗರದಲ್ಲಿ ಮೌನ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.
ಹಿರಿಯ ವಕೀಲ ವೈ.ಆರ್.ಸದಾಶಿವರೆಡ್ಡಿಯವರ ಮೇಲಿನ ಹಲ್ಲೆಯನ್ನು ಖಂಡಿಸಿ ಚಿಕ್ಕಬಳ್ಳಾಪುರ ನಗರದ ಪ್ರಮುಖ ಬೀದಿಗಳಲ್ಲಿ ಕೆಂಪು ಪಟ್ಟಿ ಧರಿಸಿದ ವಕೀಲರು ಪ್ರತಿಭಟನೆ ನಡೆಸಿದ್ರು. ಇದೇ ವೇಳೆ ಪ್ರತಿಭಟನಾ ನಿರತ ವಕೀಲರೊಬ್ರು ಮಾತನಾಡಿ, ಹೈಕೋರ್ಟ್ ನ ಹಿರಿಯ ವಕೀಲರಾದ ಸದಾಶಿವರೆಡ್ಡಿಯ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ನಾವು ಪ್ರತಿಭಟನೆ ಮಾಡ್ತಾ ಇದೀವಿ. ವಕೀಲರ ಕಚೇರಿಗೆ ನುಗ್ಗಿದ ದುಷ್ಕರ್ಮಮಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ..