ತುಮಕೂರು:
ನಮ್ಮ ನಾಡಲ್ಲಿ ಗೋ ಮಾತೆಗೆ ಪೂಜ್ಯ ಸ್ಥಾನ ಕೊಟ್ಟಿದ್ದು, ದೇವರ ಸ್ವರೂಪಿಯಾಗಿ ಪೂಜೆ ಮಾಡಿಕೊಂಡು ಬರಲಾಗ್ತಿದೆ, ಆದ್ರೆ ಅದೆಷ್ಟೇ ಕ್ರಮ ಕೈಗೊಂಡ್ರು ಕೂಡ ಅಕ್ರ,ವಾಗಿ ಗೋವುಗಳ ಸಾಕಾಣಿಕೆ ಮಾತ್ರ ನಿಲ್ತಾ ಇಲ್ಲ. ರಾತ್ರೋ ರಾತ್ರಿ ಕಟುಕರಿಗೆ ಗೋವುಗಳನ್ನ ರವಾನಿಸ್ತಾನೆ ಇರೋದು ಅಲ್ಲಲ್ಲಿ ಬೆಳಕಿಗೆ ಬಂದಿದೆ. ಬಜರಂಗ ದಳ ಕಾರ್ಯಕರ್ತರು, ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂಕ ಗೋವುಗಳನ್ನು ರಕ್ಷಣೆ ಮಾಡಲಾಗ್ತಿದೆ. ಹಾಗಿದ್ರು ಕೂಡ ತುಮಕೂರಿನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಕಾಟ ಮಾಡ್ತಾ ಇರೋದು ಕಂಡು ಬರ್ತಾನೆ ಇದೆ.
ನಿನ್ನೆ ರಾತ್ರಿ ತುಮಕೂರಿನಲ್ಲಿ ಗೋವುಗಳನ್ನು ಸಾಗಾಟ ಮಾಡೋ ಗ್ಯಾಂಗ್ ಸದ್ದಿಲ್ಲದೇ ಗೋವುಗಳನ್ನು ಸಾಗಿಸಲು ಮುಂದಾಗಿದ್ದು ಬಜರಂಗದಳ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಹೌದು ತುಮಕೂರಿನ ಲಿಂಗಾಪುರದ ಬಳಿ ಅಕ್ರಮವಾಗಿ ಗೋವುಗಳನ್ನು ವಾಹನದಲ್ಲಿ ಸಾಗಾಟ ಮಾಡಲಾಗ್ತಿತ್ತು. ಈ ಬಗ್ಗೆ ಬಜರಂಗದಳ ಕಾರ್ಯಕರ್ತರಿಗೆ ಖಚಿತ ಮಾಹಿತಿ ಸಿಕ್ಕಿದ್ದು, ಮಿಂಚಿನ ಕಾರ್ಯಾಚರಣೆ ನಡೆಸಿದ್ರು. ದಾಳಿ ವೇಳೆ ಅಕ್ರಮವಾಗಿ ಸುಮಾರು 6 ಗೋವುಗಳನ್ನು ಸಾಗಾಟ ಮಾಡ್ತಾ ಇರೋದು ಕಂಡು ಬಂದಿದೆ. ಗೋವುಗಳನ್ನು ರಕ್ಷಣೆ ಮಾಡಲಾಗಿದ್ದು, ಗೋವನ್ನು ಸಾಗಾಟ ಮಾಡ್ತಿದ್ದ ವಾಹನದ ಚಾಲಕನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಇನ್ನು ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋವುಗಳ ಸಾಕಾಣಿಕೆ ಗ್ಯಾಂಗ್ ಬಗ್ಗೆ ಮಾಹಿತಿ ಕಲೆ ಹಾಕಿ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.