CHIKKABALLAPURA: ರೈತನ ಮೇಲೆ ಫೈರಿಂಗ್ ಖಂಡಿಸಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರ: 

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಗ್ರಾಮದ ಬಳಿ ಕಲ್ಲು ಕ್ವಾರೆ ವಿರೋಧಿಸಿದ ರೈತನ ಮೇಲೆ ಉದ್ಯಮಿ ಸಕಲೇಶ್‌ ಫೈರಿಂಗ್‌ ಮಾಡಿ ದರ್ಪ ಮೆರೆದಿದ್ರು. ಫೈರಿಂಗ್‌ ಪ್ರಕರಣದಿಂದ ಇಡೀ ಗ್ರಾಮ ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರವೇ ಬೆಚ್ಚಿ ಬಿದ್ದಿತ್ತು. ಅಲ್ದೇ ಈ ಘಟನೆ ವಿರುದ್ಧ ರೈತ ಪರ ಸಂಘಟನೆ ರೊಚ್ಚಿಗೆದ್ದಿದ್ದು ಇಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹಿರಹಾಕಿದರು.

ಮಂಚೇನಹಳ್ಳಿ ರೈತನ ಮೇಲೆ ಫೈರಿಂಗ್‌ ಖಂಡಿಸಿ ರೈತ ಪರ ಸಂಘಟನೆಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಡಿಸಿ ಕಚೆರಿ ಮುಂದೆ ಪ್ರತಿಭಟನೆ ನಡೆಸಿ, ಗೂಂಡಾ ಉದ್ಯಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.  ಇನ್ನು ಕಳೆದ ದಿನವಷ್ಟೇ ಸಂಸದ ಸುಧಾಕರ್  ಅವರು ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದನ್ನು ರೈತರು ವಿರೋಧಿಸಿದ್ದರು.  ಅಲ್ದೇ ಈ ರೀತಿಯ ಸುಳ್ಳು  ಹೇಳಿಕೆಯನ್ನು ನೀಡುವುದು ಸರಿಯಿಲ್ಲಾ ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಸಂಸದ ಸುಧಾಕರ್‌ ವಿರುದ್ಧ ಸುಳ್ಳು ಸಂಸದ, ಕೋವೀಡ್  ಕಳ್ಳ  ಎಂದು ಆರೋಪ ಮಾಡಿ ದಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Author:

...
Keerthana J

Copy Editor

prajashakthi tv

share
No Reviews