ಪಾವಗಡ:
ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಪುತ್ತಳಿಯನ್ನು ಚಳ್ಳಕೆರೆ ಕ್ರಾಸ್ ನಲ್ಲಿ ಅನಾವರಣ ಗೊಳಿಸಲಾಗುವುದು ಎಂದು ತುಮುಲ್ ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ವಿ. ವೆಂಕಟೇಶ್ ತಿಳಿಸಿದರು.
ಪಾವಗಡ ಪಟ್ಟಣದ ಚಳ್ಳಕೆರೆ ಕ್ರಾಸ್ ನಲ್ಲಿ ಪುನೀತ್ ರಾಜ್ ಕುಮಾರ್ ರವರ ವೃತ್ತದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಪುತ್ತಳಿ ಹಾಗೂ ವೃತ್ತವನ್ನು ನಿರ್ಮಾಣ ಮಾಡುವ ಮೂಲಕ ತುಮಕೂರು ಜಿಲ್ಲೆಯಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಬೇಲೂರು ಗೋಪಾಲ ಕೃಷ್ಣ ಶಿವರಾಜ್ ಕುಮಾರ್ ರವರನ್ನು ಕರೆಸಿ ಅನಾವರಣ ಗೊಳಿಸಲಾಗುವುದು ಎಂದರು.
ನಮ್ಮ ಸರ್ಕಾರ ಬಂದಾಗಿನಿಂದ ರಾಜ್ಯಾದ್ಯಂತ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಐದು ಗ್ಯಾರಂಟಿಗಳು ಯಶಸ್ವಿಯಾಗಿ ಬಡಜರನ್ನು ತಲುಪಿ ಅವರ ಬದುಕು ಹಸನಾಗುತ್ತಿದೆ. ಮುಂದಿನ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಕರೆಸಿ, ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ವೀರಾಂಜನೇಯ, ಉಪಾಧ್ಯಕ್ಷರಾದ ಹನುಮೇಶ್, ಜಿಲ್ಲಾ ಈಡಿಗ ಸಂಘದ ಕಾರ್ಯದರ್ಶಿ ಸಂಮಲ್ಲಸಂದ್ರ ಶಿವಣ್ಣ, ತುಮಕೂರು ಆರ್ಯ ಈಡಿಗರ ಸಂಘದ ಅಧ್ಯಕ್ಷ ನಾಗರಾಜು,ಹಿರಿಯ ನಿರ್ದೇಶಕರುಗಳಾದ ರಾಮಪ್ಪ, ಶಂಕರಪ್ಪ, ಕೆ.ಪಿ.ಎಸ್.ಸಿ ಮಾಜಿ ಸದಸ್ಯ ಲಕ್ಷ್ಮಿನರಸಿಂಹಯ್ಯ, ನಾಮಿನಿ ಸದಸ್ಯ ಗಂಗಾಧರ್ ಪ್ರಧಾನ ಕಾರ್ಯದರ್ಶಿ ರವಿ ಹಲವು ಗಣ್ಯರು ಹಾಜರಿದ್ದರು.