ಶಿರಾ :
ಈ ರಸ್ತೆ ಜಾಗ ನನಗೆ ಸೇರಿದ್ದು, ತಲಾ ತಲಾಂತರದಿಂದ ನಮಗೆ ಸೇರಿದ ರಸ್ತೆ ಇದು ಅಂತ ವ್ಯಕ್ತಿಯೋರ್ವ ರಸ್ತೆ ಮೇಲೆ ಜಾಲಿ ಮುಳ್ಳಿನ ಬೇಲಿಯನ್ನು ಹಾಕಿರುವ ಘಟನೆ ಶಿರಾ ತಾಲೂಕಿನ ಕಸಬಾ ಹೋಬಳಿಯ ಮಾಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿರೀನಾಥನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇನ್ನು ರಸ್ತೆಯ ಮೇಲೆ ಮುಳ್ಳನ್ನು ಅಡ್ಡಹಾಕಿದ ಕಾರಣಕ್ಕೆ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ವಾಹನ ಸವಾರರು ಕೆಲಸ ಕಾಲ ಪರದಾಡುವಂತಾಯಿತು.
ನಮ್ಮ ತಾತ ಮುತ್ತಂದಿರ ಕಾಲದಿಂದಲೂ ಈ ರಸ್ತೆ ಜಾಗ ನಮಗೆ ಸೇರಬೇಕು. ನನ್ನ ಬಳಿ ಇದರ ನಕಾಶೆ ಇದೆ ಅಂತ ಹೇಳಿ ಗಿರೀನಾಥನಹಳ್ಳಿ ಗ್ರಾಮದಿಂದ ಮಾಗೋಡು ಗ್ರಾಮಕ್ಕೆ ತೆರಳುವ ರಸ್ತೆಗೆ ಮುಳ್ಳುಬೇಲಿ ಹಾಕಿದ್ದು. ರಸ್ತೆಯ ಮೇಲೆ ಮುಳ್ಳಿನ ಬೇಲಿ ಯಾಕೆ ಹಾಕಿದ್ದೀಯ ಅಂತ ಆ ವ್ಯಕ್ತಿಯನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಈ ವ್ಯಕ್ತಿ ಈ ಜಾಗ ನನ್ನದು ಅಂತ ಪಟ್ಟು ಹಿಡಿದಿದ್ದ. ರಸ್ತೆ ದಾಟೋಕೆ ಆಗದೆ ಪರದಾಡ್ತಿದ್ದ ಜನಕಂದಾಯ ಇಲಾಖೆ ಸೇರಿದಂತೆ ಪೋಲಿಸ್ ಠಾಣೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆಗೆ ಹಾಕಿದ್ದ ಮುಳ್ಳಿನ ಬೇಲಿಯನ್ನು ತೆರವುಗೊಳಿಸಿದ್ದಾರೆ.