ಪಾವಗಡ:
ಪಾವಗಡದ ಗುಜನಡು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು, ಸದಸ್ಯರುಗಳು ಪಂಚಾಯಿತಿಗೆ ಕೊಟ್ಟಿದ್ದ ಅನುದಾನದಲ್ಲಿ ಆದ ಖರ್ಚು, ವೆಚ್ಚದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಪಿಡಿಒ ರಾಘವೇಂದ್ರ ತಕ್ಷಣವೇ ಸಭೆಯಿಂದ ಎಸ್ಕೇಪ್ ಆಗಿದ್ದಾರೆ.
ಹೌದು, ನಿನ್ನೆ ಪಾವಗಡದ ಗುಜನಡು ಪಂಚಾಯಿತಿಯ ಸಾಮಾನ್ಯ ಸಭೆ ಕರೆಯಲಾಗಿತ್ತು. ಈ ವೇಳೆ ಸಭೆಯಲ್ಲಿ ಹಿಂದಿನ ಖರ್ಚು- ವೆಚ್ಚದ ಬಗ್ಗೆ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಧ್ಯಕ್ಷರು ಒಟ್ಟಾಗಿ ಪಿಡಿಒ ರಾಘವೇಂದ್ರ ಬಳಿ ಕೇಳಿದರು. ಆದರೆ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಪಿಡಿಒ ರಾಘವೇಂದ್ರ ಸಭೆಯನ್ನೇ ಬಿಟ್ಟು ಹೋಗಿದ್ದಾರೆ.
ಇನ್ನು ಈ ವೇಳೆ ಮಾತನಾಡಿದ ಪಂಚಾಯಿತಿಯ ಸದಸ್ಯರು, ಪಂಚಾಯಿತಿಯಲ್ಲಿ ಯಾವುದೇ ಕೆಲಸಗಳು ಆಗಿಲ್ಲ, ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ವಿದ್ಯುತ್ ದ್ವೀಪಗಳಿಲ್ಲ, ಪಿಡಿಒ ಗೆ ಪಂಚಾಯತ್ ಸದಸ್ಯರು ದ್ವೀಪಗಳನ್ನ ಅಳವಡಿಸಿ ಅಂದರೆ ಪಂಚಾಯಿತಿ ಯಲ್ಲಿ ಹಣ ಇಲ್ಲ ಅಂತಾರೆ. ಆದರೆ ಕೆಲಸಗಳು ಮಾಡದಿದ್ದರೂ ಬಿಲ್ಗಳು ಮಾತ್ರ ಅಗ್ತಿವೆ ಎಂದು ಪಿಡಿಒ ಮೇಲೆ ಆರೋಪ ಮಾಡ್ತಿದ್ದಾರೆ.
ಪಿಡಿಒ ಅಧಿಕಾರಿಯಿಂದ ಅವ್ಯವಹಾರ ಆಗ್ತಾ ಇದ್ದು, ಯಾವುದೇ ಕೆಲಸವನ್ನು ಕೂಡ ಮಾಡ್ತಿಲ್ಲ. ಹೀಗಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುಜನಡು ಪಂಚಾಯಿತಿ ಕಚೇರಿಗೆ ಬಂದು ಕಡತಗಳನ್ನು ಪರಿಶೀಲನೆ ಮಾಡಿ, ತನಿಖೆ ಮಾಡಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.