ಪಾವಗಡ : ಪಾವಗಡ ಜನರೇ ಎಚ್ಚರ.. ಎಚ್ಚರ | ನಾಯಿ ಕಡಿದ್ರೆ ಸಿಗಲ್ಲ ಔಷಧಿ

ಪಾವಗಡ ಸರ್ಕಾರಿ ಆಸ್ಪತ್ರೆ
ಪಾವಗಡ ಸರ್ಕಾರಿ ಆಸ್ಪತ್ರೆ
ತುಮಕೂರು

ಪಾವಗಡ:

ಪಾವಗಡ ಹೇಳಿ ಕೇಳಿ ಗಡಿ ತಾಲೂಕು. ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಲೋ ಮೀಟರ್‌ ದೂರದಲ್ಲಿದೆ. ಅಪ್ಪಿ ತಪ್ಪಿ ಈ ಭಾಗದಲ್ಲಿ ಏನಾದ್ರು ನಾಯಿ ಕಚ್ಚಿದರೆ ಔಷಧಿ ಸಿಗಲ್ಲ, ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಪಾವಗಡದಲ್ಲಿ ನಾಯಿಗಳ ಕಾಟ ಹೆಚ್ಚಗಿದೆ. ಇದರಿಂದ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿದ್ದು ತಾಲೂಕಿನಲ್ಲಿ ನಾಯಿ ಕಡಿತಕ್ಕೆ ಔಷಧಿಯೇ ಸಿಗದಂತಾಗಿದೆ. ಮಗಳಿಗೆ ನಾಯಿ ಕಡಿದಿದ್ದು, ಚಿಕಿತ್ಸೆ ಕೊಡಿಸಲೆಂದು ಸರ್ಕಾರಿ ಆಸ್ಪತ್ರೆಗೆ ತಾಯಿಯೊಬ್ಬರು ಕರೆದುಕೊಂಡು ಬಂದಿದ್ದರೆ, ಅವರಿಗೆ ಔಷಧಿಯೇ ಸಿಗದೇ ಪರದಾಡಿದ್ದಾರೆ.

ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಯ ಕೊರತೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳು ಸಬೂಬು ಹೇಳಿಕೊಂಡು ಓಡಾಡುತ್ತಿದ್ದಾರೆ, ನಾಯಿ ಕಡಿತಗೊಂಡ ಮಗಳನ್ನು ತಾಯಿಯೊಬ್ಬಳು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ತಾಯಿ ಪರದಾಡಿದ ದೃಶ್ಯ ಪ್ರಜಾಶಕ್ತಿ ಟಿವಿಗೆ ಕಂಡು ಬಂದಿತು.

ಪಾವಗಡ ತಾಲೂಕಿನಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಜನರು ಇದ್ದು, ಬಡ ಜನರಿಗಾಗಿಯೇ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಜೊತೆಗೆ ಔಷಧಿಯ ಕೊರತೆ ಹೆಚ್ಚಾಗಿದೆ. ಇದರಿಂದ ದೂರದ ಮಧುಗಿರಿ ಅಥವಾ ತುಮಕೂರಿನ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ದುಸ್ಥಿತಿ ಇದೆ. ಈ ಬಗ್ಗೆ ಪ್ರಜಾಶಕ್ತಿ ಟಿವಿ ಹಲವು ಬಾರಿ ವರದಿ ಮಾಡಿದರೂ ಕೂಡ ಅಧಿಕಾರಿಗಳು ಮಾತ್ರ ಕ್ಯಾರೇ ಅಂತಿಲ್ಲ, ಇನ್ನಾದರೂ ಅಧಿಕಾರಿಗಳು ಎಚೆತ್ತುಕೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತ ಸೇರಿ ಇತರೆ ಔಷಧಿಗಳ ಶೇಖರಣೆಗೆ ಮುಂದಾಗಬೇಕಿದೆ.

Author:

...
Editor

ManyaSoft Admin

share
No Reviews