ಪಾವಗಡ : ಪಾವಗಡ ಪುರಸಭೆಯ ನೂತನ ಅಧ್ಯಕ್ಷರ ಆಯ್ಕೆ

ಪಾವಗಡ :

ಪಾವಗಡ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಸುದೇಶ್‌ ಬಾಬು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಟಕ ಪೂರ್ವ ಅಧ್ಯಕ್ಷರಾದ ಪಿ.ಹೆಚ್.ರಾಜೇಶ್ ರವರು ರಾಜೀನಾಮೆ ನೀಡಿದ ಬೆನ್ನಲ್ಲೇ ಚುನಾವಣೆ ನಡೆಸಲಾಗಿದ್ದು, 4ನೇ ವಾರ್ಡ್‌ನ ಸದಸ್ಯರಾದ ಸುದೇಶ್‌ ಬಾಬು ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಗೆ ಇವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಸುದೇಶ್‌ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿ, ತಹಶೀಲ್ದಾರ್ ವರದರಾಜು ಘೋಷಣೆ ಮಾಡಿದರು.

ಇನ್ನು ಪುರಸಭಾ ಅಧ್ಯಕ್ಷರಾಗಿ ಸುದೇಶ್‌ ಬಾಬು ಆಯ್ಕೆಯಾದ ಬೆನ್ನಲ್ಲೇ ಸ್ನೇಹಿತರು, ಹಿತೈಷಿಗಳು, ಬೆಂಬಲಿಗರು ಹೂವಿನ ಹಾರಗಳನ್ನು ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿದರು. ಈ ವೇಳೆ ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ವಿ. ವೆಂಕಟೇಶ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುದೇಶ್ ಬಾಬುಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭ ಕೋರಿದರು.

ನೂತನ ಅಧ್ಯಕ್ಷ ಸುದೇಶ್‌ ಬಾಬು ಮಾತನಾಡಿ ವೆಂಕಟರಮಣಪ್ಪ ಆಶೀರ್ವಾದ, ಶಾಸಕ ಹೆಚ್.ವಿ.ವೆಂಕಟೇಶ್‌ ಅವರ ಸಹಕಾರದೊಂದಿಗೆ ಅಧ್ಯಕ್ಷನಾಗಿದ್ದು, ಅವರ ಮಾರ್ಗದರ್ಶನದಲ್ಲೇ ಕೆಲಸ ಮಾಡುತ್ತೇನೆ ಎಂದರು. ಪಟ್ಟಣದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸಮಸ್ಯೆಗಳಿದ್ದರೆ ಪರಿಹರಿಸುತ್ತೇನೆ ಎಂದರು.

ಈ ವೇಳೆ ಪುರಸಭೆ ಸದಸ್ಯರು ಹಾಗೂ ಅಭಿಮಾನಿಗಳು ಮತ್ತು ಪುರಸಭೆ ಸಿಬ್ಬಂದಿ ಹಾಜರಿದ್ದರು.

Author:

...
Sushmitha N

Copy Editor

prajashakthi tv

share
No Reviews