ಶಿರಾ : ಒಂದ್ಕಡೆ ಕೊರೊನಾ ಆತಂಕ, ಮತ್ತೊಂದ್ಕಡೆ ಶೀತ, ಜ್ವರ ಹೆಚ್ಚಾಗ್ತಿದ್ದು ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದಾರೆ. ಈ ನಡುವೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ,
ಶಿರಾ ನಗರದ 21ನೇ ವಾರ್ಡ್‌ನಲ್ಲಿರೋ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಚಿಕಿತ್ಸೆಗಾಗಿ ರೋಗಿಗಳು ಪರದಾಡಿದ್ರು. 21ನೇ ವಾರ್ಡ್‌ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ಒಬ್ಬರು ವೈದ್ಯರು ಇದ್ದು, ಆ ವೈದ್ಯರು ಅನಾರೋಗ್ಯದ ಕಾರಣ ರಜೆ ಮೇಲೆ ಇದ್ದಾರೆ. ಈ ನಡುವೆ ಶೀತ, ಜ್ವರದಿಂದ ನೂರಾರು ಮಂದಿ ರೋಗಿಗಳು ಆಸ್ಪತ್ರೆ ಬಳಿ ಜಮಾಯಿಸಿದ್ದು ಚಿಕಿತ್ಸೆಗಾಗಿ ಅಲೆಯುವಂತಾಯ್ತು.
ಈ ಒಂದು ಆಸ್ಪತ್ರೆ ಮಾತ್ರವಲ್ಲದೇ ನೂರಾರು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ.. ಹೀಗಾಗಿ ತುರ್ತು ಪರಿಸ್ಥಿತಿಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗ್ತುತ್ತಿಲ್ಲ, 21ನೇ ವಾರ್ಡ್‌ನಲ್ಲಿ ಕನಿಷ್ಠ ಇಬ್ಬರು ವೈದ್ಯರು ಇರಬೇಕಿತ್ತು ಆದ್ರೆ ಇಲ್ಲಿ ಒಬ್ಬರೇ ವೈದ್ಯರು ಇರೋದ್ರಿಂದ ಒಬ್ಬ ಡಾಕ್ಟರ್ ರಜೆ ತಗೊಂಡ್ರೆ ಅವತ್ತು ರೋಗಿಗಳಿಗೆ ಚಿಕಿತ್ಸೆಯೇ ಸಿಗಲ್ಲ. ಹೀಗಾಗಿ ವೈದ್ಯಾಧಿಕಾರಿಗಳು ಎಚ್ಚೆತ್ತು ವೈದ್ಯರು ಹಾಗೂ ನರ್ಸ್‌ಗಳನ್ನು ನೇಮಿಸಿ ರೋಗಿಗಳ ಪ್ರಾಣವನ್ನು ಉಳಿಸಬೇಕಿದೆ.