Newdelhi : ಸತತ ಮೂರನೇ ಬಾರಿಗೆ ಆರ್‌ಬಿಐನಿಂದ ರೆಪೋ ದರ ಇಳಿಕೆ

NEWDELHI : ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ದೇಶದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ, ಸತತ ಮೂರನೇ ಬಾರಿಗೆ ರೆಪೋ ಬಡ್ಡಿದರದಲ್ಲಿ ಕಡಿತಗೊಳಿಸಿದೆ. ಈ ಬಾರಿ 50 ಬೇಸಿಸ್‌ ಪಾಯಿಂಟ್‌ ಕಡಿತ ಮಾಡಿ, ರೆಪೋ ದರವನ್ನು ಶೇ.6 ರಿಂದ ಶೇ.5.50 ಕ್ಕೆ ಇಳಿಸಲಾಗಿದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು (MPC) ಸಭೆಯ ಬಳಿಕ 50 ಮೂಲಾಂಶದಷ್ಟು (ಬೇಸಿಸ್‌ ಪಾಯಿಂಟ್‌) ರೆಪೋ ದರ ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

ದೇಶದ ಜಿಡಿಪಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್‌ ಬಿಐ ಸತತ ಮೂರನೇ ಬಾರಿಗೆ ಈ ನಿರ್ಧಾರ ಕೈಗೊಂಡಿದೆ. ಇದರಿಂದ ಗೃಹಸಾಲದ ಪಡೆದವರು, ಇಎಂಐ ಪಾವತಿದಾರರು ಹಾಗೂ ಎಂಟರ್‌ಪ್ರೈಸ್‌ ಸಾಲ ತೆಗೆದುಕೊಂಡವರು ಲಾಭಪಡೆಯುವ ಸಾಧ್ಯತೆ ಇದೆ. ಬ್ಯಾಂಕುಗಳು ರೆಪೋ ದರ ಆಧಾರಿತ ಸಾಲಗಳ ಮೇಲಿನ ಬಡ್ಡಿದರಗಳನ್ನು ಇಳಿಸಬಹುದು.

ಶೇಕಡಾ 50 ಬೇಸಿಸ್‌ ಪಾಯಿಂಟ್ ರಷ್ಟು ಕಡಿತಗೊಳಿಸಿದ್ದು, ಇದರಿಂದ ಸಾಲ (Loan) ಮತ್ತು ಇಎಂಐಗಳ (EMI) ಬಡ್ಡಿ ದರವೂ ಇಳಿಕೆಯಾಗಲಿದೆ. ಜೊತೆಗೆ ಹೊಸ ಸಾಲಗಾರರಿಗೆ ಗೃಹ ಸಾಲಗಳು, ವಾಹನದ ಮೇಲಿನ ಸಾಲಗಳು ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ. ಆಟೊ ಮೋಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳಲ್ಲಿಯೂ ಇಳಿಕೆಯಾಗುವ ನಿರೀಕ್ಷೆ ಇದೆ.

Author:

...
Sushmitha N

Copy Editor

prajashakthi tv

share
No Reviews