CRICKET NEWS : ಜೂನ್ 11ರಿಂದ ಆರಂಭಗೊಳ್ಳುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯವು ಕ್ರಿಕೆಟ್ ಪ್ರೇಮಿಗಳಿಗೆ ಬಹು ನಿರೀಕ್ಷಿತ ಘಟ್ಟವಾಗಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ – ಈ ಎರಡು ಶಕ್ತಿಶಾಲಿ ತಂಡಗಳು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಟೈಟಲ್ ಗೆಲುವಿಗಾಗಿ ಕಣಕ್ಕಿಳಿಯುತ್ತಿವೆ. ಈ ಎರಡು ತಂಡಗಳು ಟೂರ್ನಮೆಂಟ್ನ ಇತರೆ ಎಲ್ಲ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಫೈನಲ್ ತಲುಪಿವೆ. ಇದೀಗ ಅಭ್ಯಾಸಕ್ಕೂ ಕೈ ಹಾಕಿದ್ದು, ಗೆಲುವಿನ ಕನಸು ಇಟ್ಟುಕೊಂಡಿವೆ.
ಇದರ ನಡುವೆಯೇ, ಕ್ರಿಕೆಟ್ ಜಗತ್ತಿನ ಇಬ್ಬರು ಮಹತ್ವದ ಮುಖಂಡರು – ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಮತ್ತು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ – ಈ ಫೈನಲ್ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆರೋನ್ ಫಿಂಚ್ ಅವರ ಪ್ರಕಾರ, “ಎರಡೂ ತಂಡಗಳ ಬೌಲಿಂಗ್ ದಾಳಿಗಳು ಶಕ್ತಿಶಾಲಿ. ಆಸ್ಟ್ರೇಲಿಯಾದಲ್ಲಿ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಷ್ ಹೇಜಲ್ವುಡ್ ಮತ್ತು ನಾಥನ್ ಲಿಯಾನ್ ಇದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ರಬಾಡ, ಎನ್ಗಿಡಿ, ಮಾರ್ಕೋ ಯಾನ್ಸೆನ್ ಮತ್ತು ಕೇಶವ್ ಮಹಾರಾಜ್ ಕೂಡ ಅತ್ಯುತ್ತಮ ಬೌಲರ್ಗಳು. ಆದರೆ, ಟೆಸ್ಟ್ ಕ್ರಿಕೆಟ್ ಅನುಭವದ ದಿಟ್ಟನಿಂದ ಆಸ್ಟ್ರೇಲಿಯಾ ಸ್ವಲ್ಪ ಮುಂದೆ ಇದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅದೇ ವೇಳೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ತಮ್ಮ ಸ್ಪಷ್ಟ ಮತ್ತು ಉತ್ಸಾಹಭರಿತ ಶೈಲಿಯಲ್ಲಿ, “ಲಾರ್ಡ್ಸ್ನಲ್ಲಿ ಫೈನಲ್ ಆಟವೋ ಬಹು ದೊಡ್ಡ ಹೆಮ್ಮೆ. ಇದು ನಮ್ಮ ತಂಡಕ್ಕೆ ಮಹತ್ವದ ಅವಕಾಶ. ಇಡೀ ದೇಶ ನಮ್ಮ ಬೆನ್ನಿಗೆ ನಿಂತಿದೆ. ಈ ತಂಡದಲ್ಲಿ ಗೆಲ್ಲುವ ಸಾಮರ್ಥ್ಯ ಇದೆ, ಮತ್ತು ನಾವು ಆಸ್ಟ್ರೇಲಿಯಾದ ವಿರುದ್ಧ ಗೆಲ್ಲಬಹುದು ಎಂಬ ಭರವಸೆ ನನಗೆ ಇದೆ” ಎಂದು ಹೇಳಿದ್ದಾರೆ.