ಶಿರಾ ನಗರ ವೇಗವಾಗಿ ಬೆಳೆಯುತ್ತಿದ್ದು, ನಗರ ಯೋಜನಾ ಪ್ರಾಧಿಕಾರವನ್ನ ನಗರಾಭಿವೃದ್ದಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸುವ ಶಾಸಕ ಟಿ.ಬಿ ಜಯಚಂದ್ರರವರ ಪ್ರಯತ್ನ ಯಶಸ್ವಿಯಾಗಿದ್ದು, ಸರ್ಕಾರದ ಆದೇಶದಂತೆ ಜಯಚಂದ್ರರ ಸೂಚನೆ ಮೇರೆಗೆ ನಗರಾಭಿವೃದ್ದಿ ಪ್ರಾಧಿಕಾರದ ಪ್ರಥಮ ಅಧ್ಯಕ್ಷರನ್ನಾಗಿ ಶಿರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಹನುಮಾನ್ ಬಸ್ ಮಾಲೀಕರಾದ ಮಾಜಿ ಜಿ.ಪಂ ಸದಸ್ಯ ಪಿ ಆರ್.ಮಂಜುನಾಥ್ ರನ್ನು ನಾಮನಿರ್ದೆಶನ ಮಾಡಲಾಯ್ತು. ಅಲ್ದೇ ಪ್ರಾಧಿಕಾರದ ನೂತನ ಸದಸ್ಯರುಗಳಾಗಿ ಮಾಜಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿದೇವಮ್ಮ, ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಲಕ್ಕನಹಳ್ಳಿ ಶ್ರೀನಿವಾಸ್, ಮಾಜಿ ಗ್ರಾ ಪಂ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಎತ್ತಪ್ಪನಹಟ್ಟಿ ಕಾಳಯ್ಯ ಅವರನ್ನು ನಾಮ ನಿರ್ದೇಶನ ಮಾಡಲಾಯಿತು.
ಇನ್ನು ನೂತನ ಅಧ್ಯಕ್ಷ ಪಿ.ಆರ್ ಮಂಜುನಾಥ್ ಮಾತನಾಡಿ ಶಾಸಕರ ಸಹಕಾರದಿಂದ ಈ ಹುದ್ದೆ ಸಿಕ್ಕಿದ್ದು, ಅಧ್ಯಕ್ಷ ಸ್ಥಾನ ದೊರಕಿರೋದು ಸಂತಸ ತಂದಿದ್ದು. ನನ್ನಿಂದ ಪ್ರಾಧಿಕಾರದ ಅಭಿವೃದ್ಧಿಗೆ ಹಾಗೂ ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಎಲ್ಲರ ವಿಶ್ವಾಸ ಉಳಿಸಿಕೊಂಡು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದ್ರು. ಅಲ್ದೇ ಶಿರಾ ನಗರ ತಾಲೂಕು ಕೇಂದ್ರ ಸ್ಥಾನವಾಗಿದ್ದು, ನಗರಸಭೆ ವ್ಯಾಪ್ತಿಯ 51 ಗ್ರಾಮಗಳಿಗೆ ಸೀಮಿತಗೊಳಿಸಿ ಪರಿಷೃತ ಸ್ಥಳೀಯ ಯೋಜನಾ ಪ್ರದೇಶವನ್ನ ಘೋಷಿಸಿ ಸದರಿ ಯೋಜನಾಬದ್ದ ಬೆಳವಣಿಗೆಯ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಅಲ್ದೇ ಇಲ್ಲಿನ ಜನಸಂಖ್ಯೆ ಹೆಚ್ಚಾಗುತ್ತಿದ್ದು. ಅದಕ್ಕೆ ತಕ್ಕಂತೆ ನಗರ ಬೆಳಿತ್ತಿದ್ದು, ಅಭಿವೃದ್ಧಿ ದೃಷ್ಟಿಯಿಂದ ನಗರಾಭಿವೃದ್ಧಿ ಪ್ರಾಧಿಕಾರವನ್ನಾಗಿ ಉನ್ನತೀಕರಿಸಲಾಗಿದೆ ಎಂದರು.