SIRA: ವಕ್ಪ್‌ ತಿದ್ದುಪಡಿ ವಿರುದ್ಧ ದೀಪ ಆರಿಸಿ ಪ್ರತಿಭಟನೆ ನಡೆಸಿದ ಮುಸ್ಲಿಂರು

ಶಿರಾ: 

ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್‌ ತಿದ್ದುಪಡಿ ಮಸೂದೆಯ ವಿರುದ್ಧ ಶಿರಾದಲ್ಲಿ ಮುಸ್ಲಿಂ ಭಾಂದವರು ವಿದ್ಯುತ್‌ ದೀಪಗಳನ್ನು ಆರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನಸೆಳೆದ್ರು. ಶಿರಾ ನಗರಾದ್ಯಂತ ಮುಸ್ಲಿಂರು ತಮ್ಮ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ವಿದ್ಯುತ್‌ ದೀಪಗಳನ್ನು ಆರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ವಕ್ಫ್‌ ವಿರುದ್ಧ ಶಿರಾ ನಗರದಲ್ಲಿದ್ದ ಮುಸ್ಲಿಂ ಬಾಂಧವರು ವಿದ್ಯುತ್‌ ದೀಪಗಳನ್ನು ಆರಿಸಿ ಪ್ರತಿಭಟನೆ ನಡೆಸುವಂತೆ ಮುಸ್ಲಿಂ ಸಮುದಾಯ ದಿಂದ ಕರೆ ನೀಡಲಾಗಿತ್ತು. ಅದರಂತೆ ನಿನ್ನೆ ರಾತ್ರಿ ಸುಮಾರು 9 ಗಂಟೆಯಿಂದ 9 ಗಂಟೆ 15 ನಿಮಿಷದವರೆಗೆ ಸುಮಾರು 15 ನಿಮಿಷಗಳ ಕಾಲ ತಮ್ಮ ಮನೆ ಹಾಗೂ ಅಂಗಡಿಗಳ ವಿದ್ಯುತ್‌ ದೀಪಗಳನ್ನು ಆರಿಸಿ ಪ್ರತಿಭಟನೆ ನಡೆಸಿದ್ರು. ಈ ಪ್ರತಿಭಟನೆಯಲ್ಲಿ ಹಲವಾರು ಮಂದಿ ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಇನ್ನು ಪ್ರತಿಭಟನೆಯಲ್ಲಿ ಜಾಮಿಯಾ ಮಸೀದಿ ವಕ್ಸ್ ಸದಸ್ಯರು ಹಾಗೂ  ವಿವಿಧ ಮುಸ್ಲಿಂ ಸಮುದಾಯದ ಮುಖಂಡ ಹಾಜರಿರುವ ಮೂಲಕ ಪ್ರತಿಭಟನೆಗೆ ಸಾಥ್‌ ನೀಡಿದರು.

Author:

...
Keerthana J

Copy Editor

prajashakthi tv

share
No Reviews