MADHUGIRI: ಇಫ್ತಿಯಾರ್‌ ಕೂಟದಲ್ಲಿ ಮುರಳೀಧರ್‌ ಹಾಲಪ್ಪ ಭಾಗಿ

ಮಧುಗಿರಿ: 

ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್‌ ಪ್ರಯುಕ್ತ ಮಧುಗಿರಿ ತಾಲೂಕು ಮಿಡಿಗೇಶಿಯಲ್ಲಿ  ಇಫ್ತಿಯಾರ್‌ ಕೂಟದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್‌ ಹಾಲಪ್ಪ ಭಾಗಿಯಾಗಿ, ಜಾಮೀಯಾ ಮಸೀದಿಯ ಮೌಲ್ವಿಗಳಿಗೆ ಸಮವಸ್ತ್ರ ವಿತರಿಸಿದ್ರು. ಜೊತೆಗೆ ಮೌಲಾನಾ ಖಾಸೀಂ ಧರ್ಮಗುರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಿಡಿಗೇಶಿಯ ಅಕ್ರಂಪಾಷಾ, S,N ರಾಜು , ಖಲೀಲ್ ,ವಿಶ್ವನಾಥ್, ಶ್ರೀಧರ್  ಸೇರಿ ನೂರಾರು ಮಂದಿ ಮುಸ್ಲಿಂ ಬಾಂಧವರು ಭಾಗಿಯಾಗಿದ್ರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳ ಬೇಕಾದರೆ ಅದರ ಬಗ್ಗೆ ಜ್ಞಾನವಿರಬೇಕು,ಆ ಜ್ಞಾನ  ನಿಮಗೆ ಬರಬೇಕೆಂದರೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ  ಮತ್ತು ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ,ಶ್ರಮಪಟ್ಟು ವಿದ್ಯಾಭ್ಯಾಸವನ್ನು ಮುಗಿಸಿ ಎಂದ್ರು. ಅಲ್ದೇ ಸರ್ಕಾರದಿಂದ ಸ್ಪರ್ಧಾತ್ಮಕ ತರಬೇತಿಗಳನ್ನು ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.

ಜಾಮಿಯಾ ಮಸೀದಿಯ ಮೌಲಿ ಶರೀಫ್ಮಾತನಾಡಿ, ಮೊದಲಿನಿಂದಲೂ ಮುರಳಿಧರ ಹಾಲಪ್ಪ ಮಿಡಿಕೇಶಿಯ ಭಾಗದಲ್ಲಿರುವ ಎಲ್ಲಾ ಮುಸಲ್ಮಾನರ ಪ್ರೀತಿಗೆ ಪಾತ್ರರಾಗಿದ್ದಾರೆ.ಪ್ರತಿ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಾರೆ. ಹಾಗೆ ನಮ್ಮ ಮಸೀದಿಯ ಮೌಲ್ವಿ ಗಳಿಗೆ ಮಸೀದಿಯ ಪಕ್ಕದಲ್ಲಿ ಒಂದು ಭವನವನ್ನು ಮುಸಲ್ಮಾನರಿಗಾಗಿ ನಿರ್ಮಿಸಿ ಕೊಡಬೇಕು ಎನ್ನುವ ಬೇಡಿಕೆಯನ್ನು ಇಟ್ಟರು.ಇನ್ನು ಹಿರಿಯ ಮುಖಂಡರಾದ ಮಲ್ಲಿಕಾರ್ಜುನಯ್ಯ ಮಾತನಾಡಿ ಹಿರಿಯರಿಗೆ, ಯುವಕರಿಗೆ, ಕಿವಿ ಮಾತು ತಿಳಿಸಿದ್ರು.

Author:

...
Sub Editor

ManyaSoft Admin

share
No Reviews