ಚಿಕ್ಕಬಳ್ಳಾಪುರ: ಬಿ ಖಾತಾ ಮಾಡಿಕೊಡಲು ನಗರಸಭಾ ಅಧಿಕಾರಿಗಳು ಹಿಂದೇಟು

ಚಿಕ್ಕಬಳ್ಳಾಪುರ :

ಶಾಸಕ ಪ್ರದೀಪ್‌ ಈಶ್ವರ್‌ ಅವರೇ ಒಮ್ಮೆ ಈ ಸ್ಟೋರಿ ನೋಡಿಕೊಂಡು ಬಿಡಿ ಯಾಕೆಂದ್ರೆ ಹೋದಲ್ಲಿ ಬಂದಲ್ಲಿ ಬಿ ಖಾತಾ  ಆಂದೋಲನದ  ಬಗ್ಗೆ ಬೊಬ್ಬೆ ಹೊಡೆಯುವ ನೀವು. ಒಮ್ಮೆ ನಿಮ್ಮ ನಗರಸಭೆಯಲ್ಲಿ ನಡೆಯುತ್ತಿರೋ ಅಕ್ರಮವನ್ನು ಕಣ್ಣಾರೆ ಕಂಡು. ಅಮೇಲೆ ಮಾತನಾಡಿ… ಹೌದು ಬಿ ಖಾತಾ ಆಂದೋಲನ ಆರಂಭವಾಗಿ ಸುಮಾರು 82 ದಿನಗಳು ಕಳೆದ್ರು ಈವರೆಗೂ ಕೇವಲ 125 ಬಿ ಖಾತಾಗಳನ್ನು ಮಾತ್ರ  ಸಿದ್ದ ಪಡಿಸಲಾಗಿದೆಯಂತೆ. ಇದ್ರಿಂದ ಚಿಕ್ಕಬಳ್ಳಾಪುರ ನಗರಸಭೆಯ ಕರ್ಮಕಾಂಡ ಬಯಲಾಗುತ್ತಿದೆ.

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಧಿಕಾರಿಗಳು ಸುಮಾರು 3 ಸಾವಿರ 350 ಬಿ ಖಾತಾ ಅರ್ಜಿಗಳನ್ನು ಸ್ವೀಕರಿಸಿದ್ದಾರೆ.. ಆದ್ರೆ  ಸ್ವೀಕರಿಸಿದ   ಅರ್ಜಿಗಳಲ್ಲಿ ಕೇವಲ 125 ಅರ್ಜಿಗಳನ್ನು ಅಪ್ರೂ ಮಾಡಿ ಬಿ ಖಾತಾವನ್ನು ಮಾಡಲಾಗಿದೆ. ಸರ್ಕಾರ ಬಿ ಖಾತಾ ಮಾಡಿಕೊಳ್ಳಲು 90 ದಿನಗಳ  ಕಾಲ ಅವಕಾಶ ನೀಡಲಾಗಿತ್ತು. ಈಗ 80 ದಿನಗಳ ಅವಧಿ ಮುಗಿಯುತ್ತಾ ಬಂದ್ರು ಕೂಡ ಇನ್ನು ಖಾತಾ  ಮಾಡಿಕೊಳ್ಳುವಲ್ಲಿ  ಮಾತ್ರ  ಅಧಿಕಾರಿ ಗಲೂ ಬೇಜಬ್ದಾರಿಯನ್ನು ತೋರುತ್ತಿರೋದು ಸಾಬೀತಾಗಿದೆ. ಬಿ ಖಾತಾ ಮಾಡಲು ಸಲ್ಲಿಸಿದ್ದ ಅರ್ಜಿಗಳು  ನಗರಸಭೆ ಕಚೇರಿಯಲ್ಲಿ  ಎಲ್ಲೆಂದರಲ್ಲಿ ಕಸದ ರಾಶಿಯ ಹಾಗೇ ಅರ್ಜಿಗಳನ್ನು ಬೀಸಾಡಿರೋದು ಕಂಡು ಬಂದಿದೆ.

ಇನ್ನು ಈ ಸಂಬಂಧವಾಗಿ ಅಧಿಕಾರಿಗಳನ್ನ ಕೇಳಿದ್ರೆ ಅವ್ರು ಹೇಳೋದು ಹೀಗೆ ನಮ್ಮಲ್ಲಿ ಬಿ ಖಾತಾ ಮಾಡುವ ಕೆಲಸ ಬಿರುಸಿನಿಂದ ಸಾಗುತ್ತಿದೆ. ಸದಸ್ಯ ಜನರು ಕಂದಾಯವನ್ನು ಕಟ್ಟಬೇಕಿದೆ. ಸಾರ್ವಜನಿಕರಿಂದ ಕಂದಾಯವನ್ನು ಕಟ್ಟಿಸಿಕೊಳ್ಳುವ ಕೆಲಸ ಮಾಡ್ತಿದಿವಿ. ಯಾಕಂದ್ರೆ ಸರ್ಕಾರದ ಆದೇಶದಂತೆ ನಾವು ಟ್ಯಾಕ್ಸ್‌ ಕಟ್ಟಿಸಿಕೊಳ್ಳಬೇಕಿದೆ. ಹಾಗಾಗಿ ನಾವು ಸಾರ್ವಜನಿಕರಿಗೆ ಟ್ಯಾಕ್ಸ್‌ ಕಟ್ಟುವಂತೆ ಮನವಿ ಮಾಡ್ತಾ ಇದೀವಿ. ಈ ತಿಂಗಳ ಕೊನೆಯಲ್ಲಿ ಎಲ್ಲಾ ಅರ್ಜಿಗಳನ್ನು ಸಂಪೂರ್ಣಗೊಳಿಸಲಾಗುವುದು ಎನ್ನುತ್ತಾರೆ.

ಇನ್ನು ಕೇವಲ 7 ದಿನಗಳಷ್ಟೇ ಬಿ ಖಾತಾ ಆಂದೋಲನಕ್ಕೆ ಬಾಕಿ ಉಳಿದಿದ್ದು, ಬಿ ಖಾತಾ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಉಳಿದಿರುವ  ಬಾಕಿ ದಿನಗಳಲ್ಲಿ 3500 ಅರ್ಜಿಗಳನ್ನು ಬಿ ಖಾತೆಯನ್ನು ಹೇಗೆ ವಿಲೇವಾರಿ ಮಾಡ್ತಾರೆ ಅನ್ನೋದು ಪ್ರಶ್ನೆಯಾಗಿದೆ. ಶಾಸಕ ಪ್ರದೀಪ್  ಈಶ್ವರ್  ಹೇಳಿಕೆಗಳೆಲ್ಲಾ ಕೇವಲ ಮಾತಿಗಷ್ಟೇ ಸೀಮಿತವೇ ಉಳಿಯಿತೇ… ಬಿ- ಖಾತಾ ಮಾಡಿಕೊಡಲು ನಗರಸಭಾ ಅಧಿಕಾರಿಗಳು ತಡಮಾಡ್ತಾ ಇದ್ದು, ಶಾಸಕ ಪ್ರದೀಪ್‌ ಈಶ್ವರ್‌ ಈ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

Author:

...
Keerthana J

Copy Editor

prajashakthi tv

share
No Reviews