ತುಮಕೂರು: ಪಾಲಿಕೆಯ ನಿರ್ಲಕ್ಷ್ಯಕ್ಕೆ ಕುಡಿಯಲು ನೀರಿಲ್ಲದ ಕ್ರೀಡಾಪಟುಗಳ ಪರದಾಟ

ತುಮಕೂರು :

ಜನರಿಗೆ ಶುದ್ಧ ಕುಡಿಯುವ ನೀರನ್ನ ಒದಗಿಸುವುದು ಮಹಾನಗರ ಪಾಲಿಕೆಯ ಆದ್ಯ ಕರ್ತವ್ಯ.ಅದ್ರಂತೆ ಪಾಲಿಕೆಯ ವತಿಯಿಂದ ನಗರಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗಿದೆ.ಆದ್ರೆ ಕೆಲವು ಕಡೆ ಸರಿಯಾದ ನಿರ್ವಹಣೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕಗಳು ಸೊರುಗುತ್ತಿವೆ. ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಗರದ ಪ್ರತಿಷ್ಠಿತ ಜಾಗದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವಿದ್ರು ಅದು ಉಪಯೋಗಕ್ಕೆ ಬರ್ತಿಲ್ಲ. ಇದ್ರಿಂದ ಅಲ್ಲಿಗೆ ಬರುತ್ತಿರುವ ಜನರು ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿದ್ದಾರೆ.

ಹೌದು, ಅದು ಬೇರಾವುದು ಅಲ್ಲ. ಜ್ಯೂನಿಯರ್‌ ಕಾಲೇಜು ಮೈದಾನ. ಈ ಮೈದಾನದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಕಾರ್ಯಕ್ರಮಗಳು  ನಡೆಯುತ್ತಲೇ  ಇರುತ್ತವೆ. ಇನ್ನು ಈ ಮೈದಾನದಲ್ಲಿ ಬೆಳಗ್ಗೆ ಮತ್ತು ಸಂಜೆ ವಾಕಿಂಗ್‌ ಮಾಡೋಕೆ ಅಂತ ಹಿರಿಯರು, ಮಹಿಳೆಯರು, ಮಕ್ಕಳು ಬರ್ತಾರೆ. ಅದ್ರು ಜೊತೆಯಲ್ಲಿ ಈ ಜಾಗ ಕ್ರಿಕೆಟ್‌ ಪ್ರಿಯರಿಗೆ ಕ್ರಿಕೆಟ್‌ ಆಡೋಕೆ ಪೇವರೆಟ್‌ ಸ್ಟಾಟ್‌ ಆಗಿದೆ. ಈ ಫೀಲ್ಡ್‌ನಲ್ಲಿ ಕಬ್ಬಡ್ಡಿ, ಫುಟ್‌ಬಾಲ್‌, ಖೋಖೋ ಆಡ್ತಾರೆ. ಆದ್ರೆ ಇಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕ ಮಾತ್ರ ಸಾರ್ವಜನಿಕ  ಉಪಯೋಗಕ್ಕೆ  ಬಾರದೆ ಹಳ್ಳ  ಹಿಡಿಯುತ್ತಿದೆ.ಪ್ರತಿನಿತ್ಯ ಇಲ್ಲಿಗೆ ಬರುವ ಜನರು ದಣಿವಾರಿಸಿಕೊಳ್ಳೊಕೆ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಈಗ ಬೀಗ ಜಡಿಯಲಾಗಿದೆ. ಅಲ್ದೇ ಘಟಕದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.

ಇನ್ನು 2022-23 ಸಾಲಿನಲ್ಲಿ 4 ಲಕ್ಷ ವೆಚ್ಚದಲ್ಲಿ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ಶುದ್ಧ ಕುಡಿಯುವ ನೀರಿನ  ಘಟಕವನ್ನ ನಿರ್ಮಾಣ  ಮಾಡಲಾಗಿದೆ. ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ವತಃ ನಗರದ ಶಾಸಕರಾದ ಜ್ಯೋತಿಗಣೇಶ್‌ ಅವರ ಪ್ರದೇಶಾಭಿವೃದ್ಧಿ  ಅನುದಾನ ದಲ್ಲಿಯೇ  ನಿರ್ಮಿಸಲಾಗಿತ್ತು. ಆದ್ರೆ ಇಂದು ಈ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ ಜಡಿಯಲಾಗಿದೆ. ಇದ್ರಿಂದ ಅಲ್ಲಿ  ಬರುವ  ಕ್ರೀಡಾಪಟು ಗಳು, ಸಾರ್ವಜನಿಕರು ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜೂನಿಯರ್ ಕಾಲೇಜು ಮೈದಾನದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಗಮನವಹಿಸಿ, ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ, ಕ್ರೀಡಾಪಟುಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿ ಕೊಡಬೇಕಾಗಿದೆ.

Author:

...
Keerthana J

Copy Editor

prajashakthi tv

share
No Reviews