HEALTH TIPS: ಬಿಸಿಲಿನ ದಾಹಕ್ಕೆ ಈ ಆರೋಗ್ಯಕರ ಜ್ಯೂಸ್ ಕುಡಿಯಿರಿ !

HEALTH TIPS :

ಬಿಸಿಲು ತೀವ್ರವಾಗುತ್ತಿರುವ ಈ ಬೇಸಿಗೆ ಕಾಲದಲ್ಲಿ ದಾಹ ತಣಿಸುವ ಜೊತೆಗೆ ಆರೋಗ್ಯಕ್ಕೂ ಲಾಭಕರವಾದ ಪಾನೀಯಗಳನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ. ಇಂತಹ ಸಮಯದಲ್ಲಿ ನೆಲ್ಲಿಕಾಯಿ ಜ್ಯೂಸ್ ಆರೋಗ್ಯಕ್ಕೆ ಉತ್ತಮ.

ಆಯುರ್ವೇದದಲ್ಲಿ ‘ಆಮ್ಲಿಕಾ’ ಎಂದೇ ಹೆಸರಾಗಿರುವ ನೆಲ್ಲಿಕಾಯಿ ವಿಟಮಿನ್ ಸಿ-ಯಲ್ಲಿ ತುಂಬಿರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಚರ್ಮ ಆರೋಗ್ಯವಾಗಿರುತ್ತದೆ ಮತ್ತು ದೇಹ ತಂಪಾಗಿರುತ್ತದೆ.

ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ಅತ್ಯಂತ ಸಾಮಾನ್ಯ. ಹಾಗಾಗಿ, ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು, ಬೇಸಿಗೆಯಲ್ಲಿ ಯಥೇಚ್ಚವಾಗಿ ದ್ರವ ಆಹಾರಗಳನ್ನು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆಯುರ್ವೇದ ಔಷದಗಳಲ್ಲಿ ಭಾರತೀಯ ನೆಲ್ಲಿಕಾಯಿ ಅಥವಾ ಆಮ್ಲಾವನ್ನು ಅಮೃತವೆಂದು ಪರಿಗಣಿಸಲಾಗುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಹಾಗೂ ಬಿಸಿಲಿನ ದಾಹವನ್ನು ತಣಿಸುವ ನೆಲ್ಲಿಕಾಯಿ ಜ್ಯೂಸ್ ಯಾವರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ.

ಬೇಕಾಗುವ ಸಾಮಗ್ರಿಗಳು:
ನೆಲ್ಲಿಕಾಯಿ ರಸ – ಒಂದು ಕಪ್
ಜೇನು ತುಪ್ಪ – 1 ಚಮಚ
ಪಿಂಕ್ ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
*ಮೊದಲಿಗೆ ಬೀಜ ತೆಗದ ನೆಲ್ಲಿಕಾಯಿಯನ್ನು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ.
*ನಂತರ ಒಂದು ಉದ್ದನೆಯ ಲೋಟಕ್ಕೆ ಒಂದು ಕಪ್ ನೆಲ್ಲಿಕಾಯಿ ರಸ ಹಾಕಿ.
*ಬಳಿಕ ಅದಕ್ಕೆ ಜೇನು ತುಪ್ಪ ಮತ್ತು ಪಿಂಕ್ ಉಪ್ಪು ಸೇರಿಸಿ.
*ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ.
*ನೆಲ್ಲಿಕಾಯಿ ರಸ ಕಡಿಮೆಯಿದ್ದಲ್ಲಿ ನೀರು ಬೆರೆಸಿಕೊಳ್ಳಬಹುದು.
*ನಂತರ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.

 

 

Author:

...
Keerthana J

Copy Editor

prajashakthi tv

share
No Reviews