SIRA: ಜನ ಜಾನುವಾರುಗಳ ಜೀವದ ಜೊತೆ ನಗರಸಭೆ ಚೆಲ್ಲಾಟ

ಶಿರಾ: 

ಬೇಸಿಗೇಲಿ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಆಯಾ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯೆ ಕರ್ತವ್ಯ. ನೀರು ಕೊಡೋ ಕೆಲಸ ಮಾಡೋಕೆ ಅಂತಾನೇ ಪ್ರತಿ ತಾಲೂಕಿನಲ್ಲೂ ಜಲ ಶುದ್ಧೀಕರಣ ಘಟಕಗಳನ್ನು ತೆರೆಯಲಾಗಿರುತ್ತೆ.ಆದರೆ ಶಿರಾದಲ್ಲಿರುವ ನಗರಸಭೆ ಮಾಡಿರೋ ಯಡವಟ್ಟು ಕೇಳಿದರೆ ನೀವು ಶಾಕ್‌ ಆಗುತ್ತೇರಾ..

ಮಧುಗಿರಿ, ಪಾವಗಡ, ಶಿರಾ ಈ ಭಾಗಗಳನ್ನು ಬರದ ನಾಡೆಂದೆ ಕರೆಯುತ್ತಾರೆ. ಇಂತಹ ಸ್ಥಳಗಳಲ್ಲಿ  ನೀರಿನ ಅಭಾವ ಸ್ವಲ್ಪ  ಜಾಸ್ತಿನೇ  ಇರುತ್ತದೆ.  ಆ ಕಾರಣಕ್ಕೆ ಇಲ್ಲಿ ತೆರೆದಿರೋ ಜಲ ಶುದ್ಧೀಕರಣ ಘಟಕದಿಂದ ಊರಿಗೆ ನೀರು ಕೊಡಲಾಗುತ್ತದೆ. ಶಿರಾದಲ್ಲಿರುವ ಜಲ ಶುದ್ಧೀಕರಣ ಘಟಕ ಒಂದು ಯಡವಟ್ಟು ಮಾಡಿದೆ. ಶಿರಾ ನಗರಕ್ಕೆ ನೀರು ಬಿಡೋಕೆ ಅಂತಾ ದೊಡ್ಡಕೆರೆ ಸುತ್ತ ಬಾವಿಗಳನ್ನ ಕೊರೆದಿದೆ. ಆ ಮೂಲಕ  ನಗರದ ಜನರಿಗೆ ನೀರು ಕೊಡೋ ಕೆಲಸ ಮಾಡುತ್ತಿದೆ. ಆದರೆ ಬೋರ್‌ ವೆಲ್‌ ಏನೋ ತೆಗೆಸಿದೆ. ಆದರೆ ನೀರನ್ನು ಪಂಪ್‌ ಮಾಡೋಕೆ  ಅಂತ  ಅಳವಡಿಸಿರೋ ವೈರ್‌ ನೆಲದ ಮೇಲೆ ಇದ್ದು ಜನ ಜಾನುವಾರುಗಳಿಗೆ ಯಾವಾಗ ಬೇಕಾದರೂ ತೊಂದರೆ ಆಗಬಹುದು.

ಕೆರೆಯ ಪಕ್ಕದಲ್ಲಿಯೇ ಬೋರ್‌ವೆಲ್‌ ಕೊರೆಸಲಾಗಿದೆ. ಅದ್ರಿಂದ ನೀರು ಸಾಗಿಸೋಕೆ ಪಂಪ್‌ ಸೆಟ್‌ ಅಳವಡಿಸಿದೆ. ಒಂದು ಕಡೆ ಆ ಪೈಪ್‌ಲೈನ್‌ ಒಡೆದು ನೀರು ಕೂಡ ವೇಸ್ಟ್‌ ಆಗುತ್ತಿದೆ. ಇತ್ತ ನೀರನ್ನು ಪಂಪ್‌ ಸೆಟ್‌ಗೆ ಅಳವಡಿಸಿರುವ ವೈರ್‌ಗಳು ಹುಲ್ಲಿನ ಮೇಲೆಯೇ ಹಾದುಹೋಗಿವೆ. ಕೆರೆಯ ಭಾಗವಾಗಿರುವುದರಿಂದ ಸಂಜೆ ಟೈಮ್‌ನಲ್ಲಿ ಮಕ್ಕಳೊಂದಿಗೆ ಕೆಲವರು ವಾಕಿಂಗ್‌ ಬರುತ್ತಾರೆ. ಇಲ್ಲಿ ಜಾನುವಾರುಗಳು ನೀರು  ಕುಡಿಯೋಕೆ, ಹುಲ್ಲು ಮೇಯೋದಕ್ಕೆ ಅಂತ ಬರುತ್ತವೆ. ಇಂತಹ ವೇಳೆ ವೈರ್‌ ಮೇಲೆ ಜನರು, ಪ್ರಾಣಿಗಳು ಓಡಾಡುತ್ತಾರೆ. ಈ ಟೈಮ್‌ನಲ್ಲಿ  ಕರೆಂಟ್‌ ಹೊಡೆದು ಜನರು,  ಜಾನುವಾರುಗಳು ಸಾಯೋದು ಗ್ಯಾರೆಂಟಿ. ಇತ್ತ ಜಲ ಶುದ್ಧೀಕರಣ  ಘಟಕದ ಸುತ್ತಮುತ್ತಲ  ಪ್ರದೇಶ ಕೂಡ  ಸ್ವಚ್ಛತೆಯಿಲ್ಲದೆ ಸೊರಗುತ್ತಿದೆ. ಎಲ್ಲೆಂದರಲ್ಲಿ ಬಿದ್ದಿರುವ ಗುಟುಕದ ಪ್ಯಾಕೆಟ್‌ಗಳು, ಇನ್ನು ಜಲ  ಶುದ್ಧಿಕರಣ ಘಟಕ ಬೀದಿ  ನಾಯಿಗಳ  ಆವಾಸ ಸ್ಥಾನವಾಗಿದೆ. ನಗರಕ್ಕೆ ನೀರೊದಗಿಸೋ ಕೆಲ್ಸ ಮಾಡೋ ನಗರಸಭೆಯ ಜಲ ಶುದ್ಧೀಕರಣ ಘಟಕದಲ್ಲಿಯೇ ಸ್ವಚ್ಛತೆ ಇಲ್ಲ. ಹೀಗಿದ್ದಾಗ  ನಗರದ ಜನರಿಗೆ ಹೇಗೆ ಶುದ್ಧ ಕುಡಿಯುವ ನೀರನ್ನ ಕೊಡುತ್ತದೆ ನಗರಸಭೆ.

ಕೂಡಲೇ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಕೆರೆಯ ಸುತ್ತಲು  ಅಳವಡಿಸಿರುವ  ವೈರ್‌ಗಳಿಗೆ  ಸರಿಯಾದ  ರೀತಿಯಲ್ಲಿ ಅಳವಡಿಸಬೇಕಿದೆ. ಇಲ್ಲವಾದಲ್ಲಿ ಅಲ್ಲಿ ಬರುವ ಜನರಿಕಾಗಲಿ, ಮೂಕ ಪ್ರಾಣಿಗಳಾಗಲಿ  ಸತ್ರೆ ನಗರಸಭೆ ಅಧಿಕಾರಿಗಳೆ  ಹೊಣೆ  ಆಗುತ್ತಾರೆ.

Author:

...
Keerthana J

Copy Editor

prajashakthi tv

share
No Reviews