SIRA: ಗಬ್ಬೇದ್ದು ನಾರುತ್ತಿವೆ ಗ್ರಾಮದ ಬಹುತೇಕ ಚರಂಡಿಗಳು

ಚರಂಡಿ ಸಮಸ್ಯೆ
ಚರಂಡಿ ಸಮಸ್ಯೆ
ತುಮಕೂರು

ಶಿರಾ :

ಶಿರಾ ನಗರ ಅದೆಷ್ಟು ಬೆಳೆದ್ರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ.. ಅದ್ರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ. ಹೌದು ಶಿರಾ ತಾಲೂಕಿನ ಚಂಗಾವರ ಗ್ರಾಮದ ರಸ್ತೆ ಪಕ್ಕದ ಚರಂಡಿಗಳಲ್ಲಿ ಕಸ, ಹೂಳು ತುಂಬಿಕೊಂಡ ಪರಿಣಾಮ ಚರಂಡಿ ನೀರು ಹರಿಯದೇ ರಸ್ತೆಯಲ್ಲೇ ಹರಿಯುತ್ತಿದೆ. ಇದ್ರಿಂದ ದುರ್ನಾತ ಬೀರುತ್ತಿದ್ದು ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಮನೆಗಳ ಮುಂದೆಯೇ ಕೊಳಚೆ ನೀರು ನಿಲ್ತಿದ್ದು, ಸಂಜೆ ಆದ್ರೆ ಸಾಕು ಸೊಳ್ಳೆ ಕಾಟ ಹೆಚ್ಚಾಗಿದೆ ಎಂದು ಸ್ಥಳೀಯರು ಗ್ರಾಮ ಪಂಚಾಯ್ತಿ ವಿರುದ್ದ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಂಗಾವರ ಗ್ರಾಮದಲ್ಲಿ ಸುಗಮ ಸಂಚಾರಕ್ಕಾಗಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಿದ್ದಾರೆ. ಆದ್ರೆ ಕಾಮಗಾರಿ ಸರಿಯಾಗಿ ಮಾಡದ ಪರಿಣಾಮ ಚರಂಡಿಗಳಲ್ಲಿ ಹುಲ್ಲು ಬೆಳೆದು, ಕಸ ತುಂಬಿಕೊಂಡು ಕೊಳಚೆ ನೀರು ಸರಾಗವಾಗಿ ಹರಿದು ಹೋಗದೇ, ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗ್ತಿದೆ. ಇನ್ನು ಕೆಲವೆಡೆ ಸಿಸಿ ರಸ್ತೆ ಮೇಲೆ ಕೊಳಚೆ ನೀರು ಹರಿತಿದೆ,  ಇದ್ರಿಂದ ಸ್ಥಳೀಯರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲೇ ಕಾಲ ಕಳೆಯುವಂತಾಗಿದೆ. ಆದ್ರೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮಾತ್ರ ಸಮಸ್ಯೆಯನ್ನು ಪರಿಹರಿಸಲು ಹಿಂದೇಟು ಹಾಕ್ತಿದ್ದಾರೆ, ಅಲ್ದೇ ಸ್ವಚ್ಚತೆ ಕೈಗೊಳ್ಳಬೇಕಿದ್ದ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ವಹಿಸ್ತಿದೆ ಎಂದು ಗ್ರಾಮಸ್ಥರು ಆರೋಪಿಸ್ತಾ ಇದಾರೆ.

ಇನ್ನಾದ್ರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತು ಗ್ರಾಮದಲ್ಲಿನ ಚರಂಡಿ ಸಮಸ್ಯೆಗಳಿಗೆ ಮುಕ್ತಿ ಕೊಡಿಸ್ತಾರಾ ಎಂದು ಕಾದುನೋಡಬೇಕಿದೆ.

Author:

...
Sub Editor

ManyaSoft Admin

share
No Reviews