Monalisa : ಕುಂಭಮೇಳದ ಬೆಡಗಿ ಮೊನಾಲಿಸಾಗೆ ಬಾಲಿವುಡ್‌ ನಲ್ಲಿ ಮತ್ತೊಂದು ಚಾನ್ಸ್

Monalisa :

ಪ್ರಯಾಗರಾಜ್ ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ, ಮಣಿಹಾರಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ ವಿಡಿಯೋವನ್ನು ಕೆಲವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಇದಾದ ಮೇಲೆ ಮೊನಾಲಿಸಾ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದ್ದರು. ಇದೀಗ ನೀಲಿ ಕಂಗಳ ಚೆಲುವೆ ಮೊನಾಲಿಸಾ ಅವರು ಕ್ಯಾಮರಾ ಮುಂದೆ ಬರಲಿ ಎಂದು ಕಾಯ್ತಿದ್ದವರಿಗೆ ಇದೀಗ ಗುಡ್ ನ್ಯೂಸ್‌ ಕೊಟ್ಟಿದ್ದಾರೆ.

ಮೊನಲಿಸಾಗೆ ಆಲ್ಬಂ ಮ್ಯೂಸಿಕ್‌ನಲ್ಲಿ ಚಾನ್ಸ್‌ ಸಿಕ್ಕಿದ್ದು, ವಿಶೇಷ ಹಾಡೊಂದರಲ್ಲಿ ನಟ ಉತ್ಕರ್ಷ್ ಸಿಂಗ್ ಜೊತೆ ಮೊನಲಿಸಾ ಹೆಜ್ಜೆ ಹಾಕಿದ್ದಾರೆ. ಇದರ ಚಿತ್ರೀಕರಣ ಕೂಡ ಈಗಾಗಲೇ ಪೂರ್ಣಗೊಂಡಿದೆ. ಸದ್ಯದಲ್ಲೇ ಯೂಟ್ಯೂಬ್‌ನಲ್ಲಿ ಈ ಸಾಂಗ್ ರಿಲೀಸ್ ಆಗಲಿದ್ಯಂತೆ. ಮೊನಾಲಿಸಾ ಅವರಿಗೆ ಇತ್ತೀಚಿಗೆ ಬಾಲಿವುಡ್‌ ನಿರ್ದೇಶಕ ಸನೋಜ್‌ ಮಿಶ್ರಾ ಸಿನಿಮಾವೊಂದರಲ್ಲಿ ನಾಯಕಿಯ ಪಾತ್ರಕ್ಕೆ ಆಪರ್‌ ನೀಡಿದ್ದರು. ಆದರೆ ಓರ್ವ ಯುವತಿಯ ಮೇಲಿನ ಅತ್ಯಾಚಾರದ ಆರೋಪದ ಕೇಸ್‌ನಿಂದಾಗಿ ನಿರ್ದೇಶಕನನ್ನು ಬಂಧಿಸಲಾಗಿತ್ತು. ಆಗ ಮೊನಾಲಿಸಾ ನಟಿಯಾಗುವ ಅವಕಾಶಕ್ಕೆ ಬ್ರೇಕ್‌ ಬಿದ್ದಿತ್ತು. ಈಗ ಮತ್ತೇ ಮೊನಾಲಿಸಾ ಅವರಿಗೆ ಒಂದೊಳ್ಳೆ ಅವಕಾಶ ಒದಗಿ ಬಂದಿದ್ದು, ಶೀಘ್ರದಲ್ಲೇ ಯೂಟ್ಯೂಬ್‌ ನಲ್ಲಿ ಈ ಹಾಡು ಬಿಡುಗಡೆ ಆಗಲಿದೆ.

Author:

...
Sushmitha N

Copy Editor

prajashakthi tv

share
No Reviews