Mi vs Dc : ಬುಮ್ರಾ, ಕರುಣ್ ನಾಯರ್ ನಡುವಿನ ಕಿತ್ತಾಟ | ವಾರ ಕಳೆದ್ರೂ ನಿಲ್ಲುತ್ತಿಲ್ಲ ಪರ ವಿರೋಧದ ಚರ್ಚೆ

MI vs DC :

ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಜಸ್ಮ್ರೀತ್‌ ಬುಮ್ರಾ ಮತ್ತು ಕರುಣ್‌ ನಾಯರ್‌ ನಡುವೆ ಕಿತ್ತಾಟ ನಡೆದಿರೋದು ಎಲ್ರಿಗೂ ಗೊತ್ತಿದೆ, ಜಸ್ಮ್ರೀತ್‌ ಬುಮ್ರಾ ಬೌಲಿಂಗ್‌ ವೇಳೆ ಬ್ಯಾಟಿಂಗ್‌ ಮಾಡ್ತಿದ್ದ ನಾಯರ್‌ ಓಡುತ್ತಾ ಬಂದು ಬುಮ್ರಾ ಗೆ ಡಿಕ್ಕಿ ಹೊಡೆದಿದ್ದರು. ಇದರಿಂದ ಕೋಪಗೊಂಡ ಬುಮ್ರಾ ನಾಯರ್‌ ನನ್ನು ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ಇದಾಗಿ ಒಂದು ವಾರವೇ ಕಳೆಯುತ್ತಿದ್ದರೂ ಅಭಿಮಾನಿಗಳು ಮಾತ್ರ ಈ ವಿಚಾರವಾಗಿ ಚರ್ಚೆ ನಡೆಸುತ್ತಲೇ ಇದ್ದಾರೆ.

ಬುಮ್ರಾ ಮತ್ತು ಕರುಣ್‌ ನಾಯರ್‌ ನಡುವೆ ಜಗಳ ನಡೆದಾಗ ಕೂಡಲೇ ಮಧ್ಯ ಪ್ರವೇಶಿಸಿದ ಹಾರ್ದಿಕ್‌ ಪಾಂಡ್ಯ ಪರಿಸ್ತಿತಿಯನ್ನು ತಿಳಿಗೊಳಿಸಲು ಯತ್ನಿಸಿದರು, ರೋಹಿತ್‌ ಶರ್ಮಾ ಕೂಡ ಹಾಸ್ಯ ಮಾಡ್ತಾ ಇಬ್ಬರೂ ಆಟಗಾರರನ್ನು ಸಮಾಧಾನ ಪಡಿಸಲು ಯತ್ನಿಸಿದ್ದು, ಅಂಪೈರ್‌ ಹಸ್ತಕ್ಷೇಪದಿಂದ ಅರ್ಧಕ್ಕೆ ನಿಂತ ಜಗಳ ಪಂದ್ಯ ಮುಗಿದ ಬಳಿಕ ಮತ್ತೇ ಶುರುವಾಯಿತು, ಆಗ ತಂಡದ ಸದಸ್ಯರು ಇಬ್ಬರನ್ನು ಸಮಾಧಾನ ಪಡಿಸಿದರು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಎಲ್ಲ ಸರಿ ಇದೆ ಅನ್ನೋದನ್ನು ಬಿಂಬಿಸಲು ತನ್ನ ಎಕ್ಸ್‌ ಖಾತೆಯಲ್ಲಿ ಇಬ್ಬರೂ ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿತ್ತು. ಆದಾಗ್ಯೂ ನೆಟ್ಟಿಗರು ಅಭಿಮಾನಿಗಳು, ಈ ವಿಚಾರವಾಗಿ ಭಾರೀ ಚರ್ಚೆ ನಡೆಸೋದನ್ನು ಮಾತ್ರ ಬಿಡ್ತಿಲ್ಲ.

ಇವರಿಬ್ಬರ ಜಗಳಕ್ಕೆ ಇಂಟರ್ನೆಂಟ್‌ ಅಕ್ಷರಶಃ ಡಿವೈಡ್‌ ಆಗಿದೆ. ಕೆಲವರು ಬುಮ್ರಾ ಪರ ನಿಂತರೆ ಇನ್ನು ಕೆಲವರು ನಾಯರ್‌ ಪರವಾಗಿ ಬ್ಯಾಟ್‌ ಬೀಸ್ತಿದ್ದಾರೆ. ಜಸ್ಪ್ರೀತ್‌ ಬುಮ್ರಾ ಪರ ನಿಂತವರು, "ಕರುಣ್‌ ನಾಯರ್‌ ಅತ್ಯಂತ ವೇಗವಾಗಿ ಬಂದು ಬುಮ್ರಾ ಅವರಿಗೆ ಡಿಕ್ಕಿ ಹೊಡೆದಿದ್ದು, ಈಗಷ್ಟೇ ಗಾಯದಿಂದ ಚೇತರಿಸಿಕೊಂಡಿರೋ ಬುಮ್ರಾ ಮತ್ತೆ ಪೆಟ್ಟು ತಿನ್ನಬೇಕಾಗುತ್ತಿತ್ತು. ಅಲ್ಲದೇ ಬುಮ್ರಾ ವೇಗದ ಬೌಲರ್‌ ಆಗಿರುವುದರಿಂದ, ಮೈದಾನದಲ್ಲಿ ಅಗ್ರೇಷನ್‌ ಸಾಮಾನ್ಯ" ಎಂದು ಹೇಳ್ತಾ ಇದಾರೆ.

ಇನ್ನ ಕರುಣ್‌ ನಾಯರ್‌ ಪರ ನಿಂತವರು "ಜಸ್ಪ್ರೀತ್‌ ಬುಮ್ರಾ ಅವರ ಅಗ್ರೇಷನ್‌ ಅನಗತ್ಯವಾಗಿತ್ತು. ಕರುಣ್‌ ನಾಯರ್‌ ಉದ್ದೇಶ ಪೂರ್ವಕವಾಗಿ ಬುಮ್ರಾ ಅವರಿಗೆ ಡಿಕ್ಕಿ ಹೊಡೆದಿಲ್ಲ. ಮೈದಾನದಲ್ಲಿ ಇಂತವೆಲ್ಲಾ ನಡೆಯೋದು ಕಾಮನ್. ಅಲ್ಲದೇ ಈ ಪಂದ್ಯದಲ್ಲಿ ನಾಯರ್‌ ಅವರು ಬುಮ್ರಾ ಅವರನ್ನು ಬೆಂಡೆತ್ತಿದ್ದರು. ನಾಯರ್‌ ಅವರು 40 ಎಸೆತಗಳಲ್ಲಿ 89 ರನ್‌ ಗಳಿಸಿದ್ದರು. ಇದರಿಂದ ಸಿಟ್ಟಾಗಿದ್ದ ಬುಮ್ರಾ, ಡಿಕ್ಕಿ ಹೊಡೆದ ವಿಚಾರವನ್ನೇ ದೊಡ್ಡದು ಮಾಡಿ ನಾಯರ್‌ ಜೊತೆ ಜಗಳ ನಡೆಸಿದ್ದಾರೆ ಎಂದು ಆರೋಪಿಸ್ತಾ ಇದಾರೆ.

ಒಟ್ಟಿನಲ್ಲಿ ಬುಮ್ರಾ ನಾಯರ್ ನಡುವಿನ ಈ ಡಿಕ್ಕಿ ಮ್ಯಾಟರ್‌ ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು, ಇಬ್ಬರೂ ಆಟಗಾರರು ನಗುತ್ತಾ ಪರಸ್ಪರ ಅಪ್ಪಿಕೊಂಡ ಬಳಿಕವೂ ವಿವಾದ ಮಾತ್ರ ಇನ್ನೂ ತಣ್ಣಗಾಗದಿರೋದು ಕುತೂಹಲ ಕೆರಳಿಸಿದೆ.

Author:

...
Sushmitha N

Copy Editor

prajashakthi tv

share
No Reviews