ಶಿರಾ :
ಶಿರಾ ನಗರದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಇಂದು ಮಹರ್ಷಿ ಭಗೀರಥ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಸಮಾಜದ ಅಧ್ಯಕ್ಷ ಪಾಂಡುರಂಗಪ್ಪ, ಉಪಾಧ್ಯಕ್ಷ ರಾಮಚಂದ್ರಪ್ಪ, ನಾಗರಾಜು. ವಿವಿಧ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಹಾಜರಿದ್ದರು.
ತಹಶೀಲ್ದಾರ್ ಸಚ್ಚಿದಾನಂದ ಕೂಚನೂರು ಹಾಗೂ ಉಪ್ಪಾರ ಸಮುದಾಯ ಮುಖಂಡರು ಮಹರ್ಷಿ ಭಗೀರಥರ ಪೋಟೋಗೆ ಪುಷ್ಪ ನಮನ ಸಲ್ಲಿಸಿದರು. ತಹಶೀಲ್ದಾರ್ ಸಚ್ಚಿದಾನಂದ ಕೂಚನೂರು ಮಾತನಾಡಿ, ‘ಭಗೀರಥ ಮಹರ್ಷಿಯ ಆದರ್ಶವನ್ನು ನಾವೆಲ್ಲರು ಪಾಲಿಸೋಣ. ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ. ಮಹರ್ಷಿಯವರ ತಪಸ್ಸಿನಿಂದಾಗಿಯೇ ಗಂಗೆ ಭೂಮಿಗೆ ಬಂದಿತ್ತು. ಅವರಿಲ್ಲದಿದ್ದರೆ ಗಂಗೆ ಭೂಮಿಗೆ ಬರ್ತಾ ಇರಲಿಲ್ಲ. ಅದೇ ರೀತಿಯಲ್ಲಿ ಶಿರಾದಲ್ಲಿ ಮಾನ್ಯ ಶಾಸಕರಿಲ್ಲದಿದ್ದರೆ ಎಷ್ಟೋ ನೀರಾವರಿ ಯೋಜನೆಗಳು ಶಿರಾ ಕಡೆಗೆ ಬರ್ತಾನೆ ಇರಲಿಲ್ಲ. ಹೇಮಾವತಿ ನೀರು, ಭದ್ರ, ಎತ್ತಿನ ಹೊಳೆಯಂತಹ ಯೋಜನೆಯನ್ನು ಶಿರಾಗೆ ತರ್ತಾ ಇರೋದು ಭಗೀರಥನಷ್ಟೆ ದೊಡ್ಡ ಸಾಧನೆ. ಇದು ನಮ್ಮ ಶಾಸಕ ಟಿ.ಬಿ.ಜಯಚಂದ್ರರ ಕೊಡುಗೆ ಎಂದರು. ಇನ್ನು ಸರ್ಕಾರದಿಂದ ದೊರಕಬಹುದಾದ ಎಲ್ಲಾ ಸವಲತ್ತುಗಳನ್ನು ಕೊಡಿಸುವಲ್ಲಿ ನಾನು ಕೂಡ ಶ್ರಮಿಸುತ್ತೇನೆ ಎಂದರು.
ಅಧ್ಯಕ್ಷ ಪಾಂಡುರಂಗಪ್ಪ ಮಾತನಾಡಿ, ಇದು ನಮ್ಮ ಸಮುದಾಯದ ಬಹುದಿನಗಳ ಬೇಡಿಕೆ. ಭಗೀರಥನ ಜಯಂತಿ ಆಚರಿಸುವ ಸಲುವಾಗಿ ನಾವು ಸಿಎಂ ಸಿದ್ದರಾಮಯ್ಯರನ್ನು ಕೇಳಿಕೊಂಡಿದ್ವಿ. 2015 ರಂದು ಸಿಎಂ ಸಿದ್ದರಾಮಯ್ಯ ಭಗೀರಥ ಜಯಂತಿ ಆಚರಣೆಗೆ ಸುತ್ತೋಲೆ ಹೊರಡಿಸಿ ಕಳುಹಿಸಿದರು. ಅದರಂತೆ ಇಂದು ನಾವು ತಾಲೂಕು ಮಟ್ಟದಲ್ಲಿ ಮಾಡುತ್ತಿದ್ದೇವೆ. ಇದು ಕೇವಲ ತಾಲೂಕಿಗೆ ಮಾತ್ರ ಸೀಮಿತವಾಗಿರಬಾರದು. ಅದು ಎಲ್ಲಾ ಗ್ರಾಮ ಪಂಚಾಯ್ತಿಗಳಿಗೂ ತಲುಪಬೇಕಾಗಿದೆ ಎಂದರು.