ಮಧುಗಿರಿ:
ಜಮೀನನ್ನು ಅಚ್ಚುಕಟ್ಟು ಮಾಡುವ ವೇಳೆ ಚಾಲಕನ ಅಜಾಗರುಕತೆಯಿಂದ ಟ್ರ್ಯಾಕ್ಟರ್‌ಗೆ ಸಿಲುಕಿ ರೈತನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ತಿಪ್ಪಾಪುರ ತಾಂಡದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಜಮೀನು ಮಾಲೀಕ ಫಕೀರಪ್ಪ ನಾಯ್ಕ್ ಮೃತ ಪಟ್ಟವರಾಗಿದ್ದಾರೆ.
ತಿಪ್ಪಾಪುರ ತಾಂಡದ ಹೊರವಲಯದಲ್ಲಿರುವ ಸರ್ವೆ ನಂ 158 ರಲ್ಲಿ 18ರ ಜಂಟಿ ಮಾಲೀಕರಾಗಿದ್ದ ಫಕೀರಪ್ಪ ತನ್ನ ತೋಟವನ್ನು ಟ್ರ್ಯಾಕ್ಟರ್ ಮೂಲಕ ಕ್ಲೀನ್ ಮಾಡಿಸುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್ ಚಾಲಕನ ಅಜಾಗರುಕತೆಯಿಂದ ಟ್ರ್ಯಾಕ್ಟರ್ ಫಕೀರಪ್ಪನ ಮೇಲೆ ಹರಿದಿದೆ. ಹರಿದಿದೆ. ಟ್ರ್ಯಾಕ್ಟರ್‌ನ ರೋಟರಿಗೆ ಸಿಲುಕಿದ ರೈತ ಫಕೀರಪ್ಪ ಅವರ ದೇಹ ಛಿದ್ರ ಛಿದ್ರವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಮೀನು ಮಾಲೀಕ ಫಕೀರಪ್ಪ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದು, ಕಣ್ಣೀರಾಕುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ್, ಸಿಪಿಐ ಹನುಮಂತರಾಯಪ್ಪ, PSI ಅಮ್ಮಣಗಿ ಭೇಟಿ ನೀಡಿ ಪರಿಶೀಲಿಸಿ ನಡೆಸಿದ್ದಾರೆ. ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.