KITCHEN TIPS: ರುಚಿಕರವಾದ ಹೆಸರು ಬೇಳೆ ಹಲ್ವಾ ಮಾಡುವ ವಿಧಾನ

KITCHEN TIPS: 

ಹೆಸರು ಬೇಳೆ ಹಲ್ವಾ

*ಬೇಕಾಗುವ ಸಾಮಗ್ರಿಗಳು:

ಹೆಸರು ಬೇಳೆ - 1/2

ಬೆಲ್ಲ – 1/2 ಬಟ್ಟಲು

ಹಾಲು – 2 ಬಟ್ಟಲು

ತುಪ್ಪ 1/2 ಬಟ್ಟಲು

ಗೋಡಂಬಿ- ಸ್ವಲ್ಪ

ದ್ರಾಕ್ಷಿ-ಸ್ವಲ್ಪ

ಬಾದಾಮಿ-ಸ್ವಲ್ಪ

ಏಲಕ್ಕಿ ಪುಡಿ – 1/2 ಚಮಚ

*ಮಾಡುವ ವಿಧಾನ

ಮೊದಲು ಹೆಸರು ಬೇಳೆಯನ್ನು ತೆಗೆದುಕೊಂಡು ಎರಡು ಬಾರಿ ಚೆನ್ನಾಗಿ ತೊಳೆದು ಕಾಟನ್ ಬಟ್ಟೆಯ ಮೇಲೆ ಹಾಕಿ ನೀರು ಹೋಗುವಂತೆ ಮಾಡಿ. ನಂತರ ಅದನ್ನ ಹುರಿದುಕೊಳ್ಳಿ. ಅದರ ಹಸಿ ವಾಸನೆ ಹೋಗಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಉರಿಯನ್ನ ಆರಿಸಿ. ಹುರಿದ ಹೆಸರುಕಾಳನ್ನು ಮಿಕ್ಸರ್‌ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ.

ನಂತರ ಜೊತೆಜೊತೆಗೇ ಮತ್ತೊಂದು ಪಾತ್ರೆಯಲ್ಲಿ ಅರ್ಧ ಬಟ್ಟಲು ಬೆಲ್ಲವನ್ನ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸಿಂಪಡಿಸಿ ಸಣ್ಣ ಉರಿಯ ಮೇಲಿಟ್ಟು ಬೆಲ್ಲದ ಸಿರಪ್‌ ತಯಾರಿಸಿಟ್ಟುಕೊಳ್ಳಿ. ಸ್ವಲ್ಪ ದಪ್ಪ ತಳದ ಬಾಣಲೆಯನ್ನ ತೆಗೆದುಕೊಂಡು ಅದಕ್ಕೆ ಒಂದು ಟೇಬಲ್‌ ಸ್ಪೂನ್‌ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹಾಗೂ ಬಾದಾಮಿ ಚೂರುಗಳನ್ನು ಹಾಕಿ ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಿ.

ನಂತರ 1ಚಮಚ ತುಪ್ಪ ಸೇರಿಸಿ ಅದಕ್ಕೆ ಹೆಸರು ಬೇಳೆಯ ಹಿಟ್ಟನ್ನು ಹಾಕಿ ಹುರಿಯಿರಿ ತುಪ್ಪದೊಂದಿಗೆ ಸೇರಿ ಹೆಸರು ಬೇಳೆಯ ಪುಡಿ ಮೆತ್ತಗಾಗುತ್ತಿದ್ದಂತೆ ಅದಕ್ಕೆ ಬಿಸಿ ಹಾಲನ್ನು ಹಾಕಿ ಚನ್ನಾಗಿ ಕಲಕಿ. ಹಾಲಿನಲ್ಲಿ ಹೆಸರು ಬೇಳೆಯ ಹಿಟ್ಟು ಬೇಯುತ್ತಿದ್ದಂತೆ ತುಪ್ಪ ಮತ್ತು ಬೆಲ್ಲದ ಸಿರಪ್‌ನ್ನೂ ಸೇರಿಸಿ ಸಣ್ಣ ಉರಿಯಲ್ಲಿ ಸರಿಯಾಗಿ ಮಿಕ್ಸ್‌ ಮಾಡಿಕೊಳ್ಳಿ.

ಮಿಶ್ರಣ ಸರಿಯಾಗಿ ಬೆಂದಾಗ ಅದು ತುಪ್ಪ ಬಿಡುತ್ತದೆ. ಆಗ ಹಲ್ವಾ ಸಿದ್ಧಗೊಂಡಿದೆ ಎಂದು ಅರ್ಥ. ಸಿದ್ಧಗೊಂಡ ಹಲ್ವಾಕ್ಕೆ ಏಲಕ್ಕಿ ಪುಡಿ ಮತ್ತು ಮೊದಲೇ ಹುರಿದು ಇಟ್ಟುಕೊಂಡಿದ್ದ ಗೋಡಂಬಿ, ದ್ರಾಕ್ಷಿ ಹಾಗೂ ಬಾದಾಮಿ ಚೂರುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಹೆಸರು ಬೇಳೆ ಹಲ್ವಾ ಸವಿಯಲು ಸಿದ್ಧ.

 

Author:

...
Keerthana J

Copy Editor

prajashakthi tv

share
No Reviews