ತುಮಕೂರು : ಸಾಧನೆಯ ಶಿಖರ ಏರಿದ ತುಮಕೂರಿನ ವಿದ್ಯಾನಿಧಿ ವಿದ್ಯಾರ್ಥಿನಿಯರು

ತುಮಕೂರು :

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದಿಂದಾಗಿ ತುಮಕೂರಿನ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ರಾಜ್ಯಕ್ಕೆ ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದ್ಧಾರೆ. ಈ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಮಕೂರಿನ ವಿದ್ಯಾನಿಧಿ ವಿದ್ಯಾರ್ಥಿನಿಯರು ಸಾಧನೆಯ ಶಿಖರವನ್ನೇರಿದ್ದಾರೆ. ವಿದ್ಯಾನಿಧಿ ಕಾಲೇಜಿನ ವಾಣಿಜ್ಯ ವಿಭಾಗದ ಶ್ರೀ ಲಕ್ಷ್ಮೀ ಎಂಬ ವಿದ್ಯಾರ್ಥಿನಿ 596 ಅಂಕಗಳನ್ನು ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಈ ಫಲಿತಾಂಶಕ್ಕೆ ತೃಪ್ತಿಗೊಳ್ಳದ ಶ್ರೀಲಕ್ಷ್ಮೀ ಮರು ಮೌಲ್ಯಮಾಪನಕ್ಕೆ ಹಾಕಿದ್ದರು.

ಇದೀಗ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟಗೊಂಡಿದ್ದು 598 ಅಂಕಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನು ನವಿತಾ ಎಂಬ ವಿದ್ಯಾರ್ಥಿ ವಾಣಿಜ್ಯ ವಿಭಾಗದಲ್ಲಿ 591 ಅಂಕಗಳನ್ನು ಪಡೆದಿದ್ದರೂ ಇವರು ಕೂಡ ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, 598 ಅಂಕಗಳು ಪಡೆಯುವ ಮೂಲಕ ಶ್ರೀ ಲಕ್ಷ್ಮೀ ಜೊತೆ ನವಿತಾ ಕೂಡ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದು ವಿದ್ಯಾನಿಧಿ ಕಾಲೇಜಿನ ಕೀರ್ತಿಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.

ಇನ್ನು ಮರು ಮೌಲ್ಯಮಾಪನ ಫಲಿತಾಂಶದಿಂದಾಗಿ ವಿದ್ಯಾನಿಧಿ ಕಾಲೇಜಿನ ಜಾಹ್ನವಿ 596 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ, ಗಾಯತ್ರಿ ಆರ್‌ 594 ಅಂಕಗಳೊಂದಿಗೆ 8ನೇ ರ್ಯಾಂಕ್‌ ಪಡಿದ್ರೆ, ಕಶಿಶ್‌ ಎ. ಜೈನ್‌ 592 ಅಂಕಗಳೊಂದಿಗೆ 8ನೇ ರ್ಯಾಂಕ್‌ , ಗುಣಸಾಗರಿ 591 ಅಂಕಗಳೊಂದಿಗೆ 9ನೇ ರ್ಯಾಂಕ್‌ ಹಾಗೂ ಪ್ರೇರಣಾ ಜೈನ್‌ ಹೆಚ್ಚುವರಿ 10 ಅಂಕಗಳೊಂದಿಗೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರ ಜೊತೆಗೆ ವಿಜ್ಞಾನ ವಿಭಾಗದಲ್ಲಿ ಸಿರಿ ಕೊಂಡ ಎಂಬ ವಿದ್ಯಾರ್ಥಿನಿ 592 ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದುಕೊಂಡಿದ್ದಾರೆ.

ಮರುಮೌಲ್ಯಮಾಪನ ಫಲಿತಾಂಶದಿಂದಾಗಿ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಕ್ಕೆ ರ್ಯಾಂಕ್‌ ಮೇಲೆ ರ್ಯಾಂಕ್‌ ಪಡೆದುಕೊಂಡ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿದ್ರು. ಈ ವೇಳೆ ಮಾತನಾಡಿದ ಟಾಪರ್‌ ಆದ ವಿದ್ಯಾರ್ಥಿನಿಯರು, ಕಳೆದ ಬಾರಿ ನಮಗೆ ಅಂಕಗಳು ಕಡಿಮೆಯಾಗಿದ್ದವು. ಆದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದೇವು.  ಮೊದಲ ಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಸಿಕ್ಕಿದ್ದು ಖುಷಿ ಸಿಕ್ಕಿದೆ ಎಂದ್ರು.

ಇನ್ನು ಈ ವೇಳೆ ವಿದ್ಯಾನಿಧಿ ಕಾಲೇಜಿನ ಮುಖ್ಯಸ್ಥರು ಮಾತನಾಡಿ, ಕಳೆದ ಬಾರಿ ರಿಸಲ್ಟ್‌ನಲ್ಲಿ ನಮ್ಮ ವಿದ್ಯಾರ್ಥಿನಿಯರ  ಕೆಲ ಅಂಕಗಳು ಕಡಿಮೆಯಾಗಿದ್ದವು  ಆದರೆ ನಮ್ಮ ವಿದ್ಯಾರ್ಥಿಗಳು  ಮರು ಮೌಲ್ಯಮಾಪನಕ್ಕೆ ಹಾಕಿದ್ದರು.  ಇದೀಗ ಮರು ಮೌಲ್ಯಮಾಪನದ ಫಲಿತಾಂಶದಿಂದಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ,” ಎಂದು ಸಂತಸ ವ್ಯಕ್ತಪಡಿಸಿದರು.

ತುಮಕೂರಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದ್ಯೇಯೋದ್ದೇಶದಿಂದ ವಿದ್ಯಾನಿಧಿ ಕಾಲೇಜು ಆರಂಭವಾಗಿದ್ದು, ಸದ್ದುದ್ದೇಶದಿಂದ ಆರಂಭವಾಗಿದ್ದ ಕಾಲೇಜಿಗೆ ವಿದ್ಯಾರ್ಥಿಗಳು ಹೆಮ್ಮೆ ತರುವಂತಹ ಫಲಿತಾಂಶ ತಂದುಕೊಟ್ಟಿದ್ದಾರೆ. ಈ ಮೂಲಕ ಇಡೀ ತುಮಕೂರಿಗೆ ವಿದ್ಯಾನಿಧಿ ಕಾಲೇಜು ವಿದ್ಯಾರ್ಥಿಗಳು ಮಾದರಿಯಾಗಿದೆ. ಸದ್ಯ ವಿದ್ಯಾನಿಧಿ ಕಾಲೇಜಿನಲ್ಲಿ ಪ್ರವೇಶಾತಿ ಆರಂಭಗೊಂಡಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕೆ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

Author:

...
Sushmitha N

Copy Editor

prajashakthi tv

share
No Reviews