ಮಧುಗಿರಿ : ಈಜು ಬಾರದೇ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಧಾರುಣ ಸಾವು..!

ಜಯಮಂಗಲಿ ನದಿ ಕೊಡಿಗೇಹಳ್ಳಿ
ಜಯಮಂಗಲಿ ನದಿ ಕೊಡಿಗೇಹಳ್ಳಿ
ತುಮಕೂರು

ಮಧುಗಿರಿ: 

ಶಾಲೆ ಮುಗಿಸಿ ಈಜಾಡಲು ತೆರಳಿದ್ದ ವಿದ್ಯಾರ್ಥಿ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಧಾರುಣ ಘಟನೆ ಮಧುಗಿರಿ ತಾಲೂಕಿನ ಕೊಡಿಗೇಹಳ್ಳಿ ಬಳಿಯ ಜಯಮಂಗಲಿ ನದಿಯಲ್ಲಿ ನಡೆದಿದೆ. ರಂಗನಹಳ್ಳಿ ಗ್ರಾಮದ 14 ವರ್ಷದ ಹರ್ಷವರ್ಧನ ಎಂಬ ಬಾಲಕ ಮೃತ ದುರ್ದೈವಿಯಾಗಿದ್ದಾನೆ. ಹರ್ಷವರ್ಧನ್‌ ಕೊಡಿಗೇನಹಳ್ಳಿಯ ಸರ್ವೋದಯ ಪ್ರೌಢ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ದೇವರಾಜು ಅರಸು ಹಾಸ್ಟೆಲ್‌ನಿಂದಲೇ ಬರ್ತಾ ಇದ್ದ. ಮಧ್ಯಾಹ್ನ ಊಟ ಮಾಡಿ 2 ಗಂಟೆ ಸುಮಾರಿಗೆ ಸ್ನೇಹಿತರ ಜೊತೆ ಜಯಮಂಗಲಿ ನದಿಗೆ ಈಜಾಡಲು ತೆರಳಿದ್ದ, ದುರಾದೃಷ್ಟವಶಾತ್‌ ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇವತ್ತು ಎಕ್ಸಾಂ ಇಲ್ಲದಿದ್ದರೂ ಡ್ರಾಯಿಂಗ್‌ ಪ್ರಾಕ್ಟಿಸ್‌ಗೆ ಅಂತಾ ಶಾಲೆಗೆ ಬಂದಿದ್ದ ಹರ್ಷವರ್ಧನ್‌, ಮಧ್ಯಾಹ್ನ ತರಗತಿ ಮುಗಿಸಿ ವಸತಿ ಶಾಲೆಯಲ್ಲಿ ತೆರಳಿ ಊಟ ಮುಗಿಸಿಕೊಂಡು ಸ್ನೇಹಿತರ ಜೊತೆಗೆ ಈಜಾಡಲು ಜಯಮಂಗಲಿ ನದಿಗೆ ಹೋಗಿದ್ದು, ಈಜು ಬಾರದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಕೂಡಲೇ ಸ್ಥಳದಲ್ಲೇ ಇದ್ದ ಕುರಿಗಾಹಿ ರಕ್ಷಿಸಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಕೂಡಲೇ ಬ್ಯಾಗ್‌ನಲ್ಲಿದ್ದ ಆಧಾರ್‌ ಕಾರ್ಡ್‌ನಿಂದ ಪೋಷಕರಿಗೆ ಕುರಿಗಾಹಿ ಫೋನ್‌ ಮಾಡಿ ಮಾಹಿತಿ ನೀಡಿದ್ದಾನೆ. ಆದರೆ ಅಷ್ಟರಲ್ಲೀ ಆಗಲೇ ಬಾಲಕ ಹರ್ಷವರ್ಧನ್‌ ಉಸಿರು ನಿಲ್ಲಿಸಿದ್ದಾನೆ.

ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ನದಿಯಲ್ಲಿದ್ದ ಬಾಲಕನ ಶವವನ್ನು ಹೊರತೆಗೆಯಲಾಯ್ತು. ಬಳಿಕ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯಿತು. ಬಾಲಕನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

Author:

...
Editor

ManyaSoft Admin

Ads in Post
share
No Reviews