ಮಧುಗಿರಿ:
ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ಶೀಘ್ರವೇ ಎತ್ತಿನಹೊಳೆ ನೀರು ಹರಿಸುವ ಭರವಸೆಯನ್ನು ನೀಡಿದ್ದಾರೆ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದ್ದಾರೆ. ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಕೊಡಿಗೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಟ್ಟೆ ಗ್ರಾಮದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕದವನ್ನು ರಾಜೇಂದ್ರ ರಾಜಣ್ಣ ಉದ್ಘಾಟಿಸಿದರು. ಸಂಘದ ಮೇಲ್ವಿಚಾರಕ ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣ ರೆಡ್ಡಿ, ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ, ಗ್ರಾಪಂ ಸದಸ್ಯರಾದ ಶ್ರೀರಂಗ ನಾಯಕ, ದೀಪಕ್, ಅಂಜಮ್ಮ, ಸೇರಿ ಹಲವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ರಾಜೇಂದ್ರ ರಾಜಣ್ಣ ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ನುಡಿದಂತೆ ನಡೆಯುತ್ತಿದೆ. ನಮ್ಮ ಶಾಸಕರು ಹಾಗೂ ಸಚಿವರು ಕ್ಷೇತ್ರ ಅಭಿವೃದ್ದಿಗೆ ಹೆಚ್ಚು ಕಾಳಜಿವಹಿಸಿದ್ದು ಅಭಿವೃಧ್ಧಿ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದರು. ಇನ್ನು ಬರಪೀಡಿತ ತಾಲೂಕುಗಳಾದ ಮಧುಗಿರಿ ಮತ್ತು ಕೊರಟಗೆರೆಗೆ ಮುಖ್ಯಮಂತ್ರಿಗಳು ಸಣ್ಣ ಇಲಾಖೆಗೆ 500 ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದು, ಮಧುಗಿರಿಯ 45 ಹಾಗೂ ಕೊರಟಗೆರೆ ತಾಲ್ಲೂಕಿನ ಕೆರೆಗಳಲ್ಲಿ ಅಂತರ್ಜಲ ಹೆಚ್ಚಿಸಲು ರೈತ ಪರ ಯೋಜನೆಗಳಿಗೆ ಪೂರಕವಾಗಿದೆ ಎಂದರು. ಅಲ್ಲದೇ ಬೇಸಿಗೆ ಆರಂಭಗೊಳ್ಳುತಿದ್ದು ಅಧಿಕಾರಿಗಳು ಹೆಚ್ಚು ಮುತುವರ್ಜಿಸಬೇಕು. ಎಲ್ಲಾದರೂ ನೀರಿನ ಸಮಸ್ಯೆ ಎಂದು ಸಾರ್ವಜನಿಕರು ಸಚಿವರಿಗೆ ಬಳಿ ದೂರು ತರದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.