ಮಧುಗಿರಿ : ಮಧುಗಿರಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ

ಮಧುಗಿರಿ : 

ಮಧುಗಿರಿ ಪಟ್ಟಣದ ಪೊಲೀಸ್‌ ಠಾಣಾ ಆವರಣದಲ್ಲಿ ಯುಗಾದಿ ಮತ್ತು ರಂಜಾನ್‌ ಹಬ್ಬದ ಅಂಗವಾಗಿ ಶಾಂತಿ ಸಭೆಯನ್ನು ನಡೆಸಲಾಯಿತು. ಈ ವೇಳೆ ಸಿಪಿಐ ಹನುಮಂತರಾಯಪ್ಪ, ಪಿಎಸ್‌ ಐ ಮುತ್ತುರಾಜ್‌, ಪುರಸಭಾ ಮಾಜಿ ಅಧ್ಯಕ್ಷ ಎಂ.ವಿ ಗೋವಿಂದರಾಜು ಸದಸ್ಯರಾದ ಅಲೀಮ್ ಉಲ್ಲಾ, ಸಾಧಿಕ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ಡಿವೈಎಸ್ಪಿ ಮಂಜುನಾಥ್‌ ಮಾತನಾಡಿ ಮಧುಗಿರಿಯಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆ ಕಾಪಾಡಿಕೊಂಡು ಬಂದಿದ್ದು, ನಾನು ಇಲ್ಲಿ ಡಿವೈಎಸ್ಪಿ ಆಗಿ ಮೂರು ತಿಂಗಳ ಅವಧಿಯಲ್ಲಿ ಉಪವಿಭಾಗದ ಮಟ್ಟದಲ್ಲಿ ಯಾವದೇ ಅಹಿತಕರ ಘಟನೆ, ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಿದ್ದು, ಮಟ್ಕಾ ಮತ್ತು ಜೂಜಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದರು. ಅಲ್ಲದೇ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಿಕ್ಕಾಕೊಂಡರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇನ್ನು ಪಿಎಸ್‌ ಐ ವಿಜಯ್ ಕುಮಾರ್‌ ಮಾತನಾಡಿ ಯುಗಾದಿ ಹಬ್ಬದ ಮರುದಿನವೇ ರಂಜಾನ್‌ ಬಂದಿರೋದರಿಂದ ಎಲ್ಲಾ ಹಿಂದೂ ಮುಸ್ಲಿಂ ಬಾಂದವರು ಶಾಂತ ರೀತಿಯಿಂದ ಹಬ್ಬಗಳನ್ನು ಆಚರಣೆ ಮಾಡಬೇಕು ಅಂದರು. ಅಲ್ಲದೇ ರಾತ್ರಿ ವೇಳೆ ಅನಗತ್ಯ ಓಡಾಟ ಮಾಡೋದು, ರಂಜಾನ್‌ ಪ್ರಾರ್ಥನಾ ವೇಳೆಯಲ್ಲಿ ದ್ವಿಚಕ್ರ ವಾಹನದಲ್ಲಿ ಯುವಕರು ಕರ್ಕಶ ಶಬ್ದ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಇನ್ನು ಯುಗಾದಿ ಸಂದರ್ಭದಲ್ಲಿ ಸಹ ಜೂಜಾಟದಲ್ಲಿ ಪಾಲ್ಗೊಂಡರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್‌ ಮಾತನಾಡಿ ಮಧುಗಿರಿ ಪಟ್ಟಣ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ಯಾವುದೇ ಗಲಭೆಗಳಿಗೆ ಅವಕಾಶವಿಲ್ಲ, ಹಿಂದೂ ಮುಸ್ಲಿಮರು ಅಣ್ಣತಮ್ಮಂದಿರಂತೆ ಇರುತ್ತೇವೆ ಎಂದರು, ಅಲ್ದೇ ಪೊಲೀಸರಿಗೆ ಯಾವುದೇ ಕೆಲಸ ಕೊಡದಂತೆ ಹಬ್ಬವನ್ನು ಆಚರಿಸೋದಾಗಿ ಸಾರ್ವಜನಿಕರ ಪರವಾಗಿ ಭರವಸೆಯನ್ನು ನೀಡಿದ್ರು.

Author:

...
Editor

ManyaSoft Admin

share
No Reviews