ಮಧುಗಿರಿ:
ಮಧುಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಎಚ್.ಬಿ.ಶಿವಕುಮಾರ್, ವಿಜಯ ಎಂಟರ್ ಪ್ರೈಸಸ್ ಡಯಾಲಿಸಿಸ್ ಕೇಂದ್ರದ ಆವರಣದಲ್ಲಿ ನಾಳೆ ಮಕ್ಕಳ ದೃಷ್ಟಿ ದೋಷ ನಿವಾರಣೆಗಾಗಿ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ, ಎಂದು ಪಾವಗಡದ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಸ್ವಾಮಿ ಜಪಾನಂದಜಿ ಮಹಾರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಪಾನಂದಜಿ ಅವರು ನೇತ್ರಾ ತಪಾಸಣಾ ಶಿಬಿರವನ್ನು ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಸ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮೀಳಾ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾ ಅಂಧತ್ವ ನಿರ್ಮೂಲನಾಧಿಕಾರಿ ಡಾ. ರವೀಂದ್ರ ನಾಯ್ಡು, ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಾದ ನಾಹಿದ ಜಮ್ ಜಮ್, ಪ್ರಖ್ಯಾತ ಮಕ್ಕಳ ನೇತ್ರ ತಜ್ಞೆ ಡಾ. ವಸುಧಾ ನರೇಶ್ ಸೇರಿದಂತೆ ಬಿ.ಇ.ಒ K H ಹನುಮಂತರಾಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಈ ವೇಳೆ ಹಿರಿಯ ತಜ್ಞ ಸಲಹೆಗಾರ ಡಾ.ಜಿ.ಕೆ ಜಯರಾಮ್, ಎಂಜಿಎಂ ನ್ಯಾಷನಲ್ ಸೊಸೈಟಿ ಕಾರ್ಯದರ್ಶಿ ಎಂ.ಎಸ್. ಶಂಕರ ನಾರಾಯಣ, ಶಿಕ್ಷಣ ಇಲಾಖೆ ಅಧಿಕಾರಿ ದಾಸಪ್ಪ, ಸಂಯೋಜಕರಾದ ಅನುರಾಧ ಉಮಾಶಂಕರ್, ಅಕ್ಷಯ್, ಎಂ,ಎಲ್ ಮನೋಹರ್, ತಾಲೂಕು ಕಸಾಪ ಅಧ್ಯಕ್ಷೆ ಸಹನ ನಾಗೇಶ್ ಉಪಸ್ಥಿತರಿದ್ದರು.