IPL 2025 : ಇವತ್ತಿನ RCB vs KKR ಮ್ಯಾಚ್ ನಡಿಯೋದೇ ಡೌಟ್!

CRICKET : 

ಇಂದು ಪುನರಾರಂಭವಾಗುತ್ತಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಹತ್ವದ ಪಂದ್ಯ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಸೆಣಸಾಡಲಿವೆ. ಇನ್ನು ಈ ಪಂದ್ಯವು ಅಂಕಪಟ್ಟಿಯ ಹಿನ್ನಲೆಯಲ್ಲಿ ಬಹುಮುಖ್ಯವಾಗಿದ್ದು, ಆರ್ಸಿಬಿಗೆ ಗೆಲುವು ಪ್ಲೇಆಫ್ ಟಿಕೆಟ್ ಖಚಿತಪಡಿಸಿಕೊಳ್ಳುವ ಅವಕಾಶ, ಇನ್ನೊಂದೆಡೆ ಕೆಕೆಆರ್ ತಂಡಕ್ಕೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.

ರಜತ್ ಪಾಟೀದಾರ್ ನೇತೃತ್ವದ ಆರ್ಸಿಬಿ, 11 ಪಂದ್ಯಗಳ ಪೈಕಿ 8 ಗೆಲುವುಗಳೊಂದಿಗೆ 16 ಅಂಕಗಳಂತೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್, ಅಸ್ಥಿರ ಪ್ರದರ್ಶನ ನೀಡಿದ್ದು, 12 ಪಂದ್ಯಗಳಿಂದ 5 ಗೆಲುವು, 6 ಸೋಲು, 1 ರದ್ದಾದ ಪಂದ್ಯ ಸೇರಿ 11 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಆದರೆ, ಈ ಬಹುಮುಖ್ಯ ಪಂದ್ಯ ನಡೆಯುವ ಪ್ರಶ್ನೆ ಎದುರಾಗಿದೆ.

ಹವಾಮಾನ ಇಲಾಖೆ ಪ್ರಕಾರ, ಸಂಜೆ 7 ಗಂಟೆಗೆ ಮಳೆಯ ಸಾಧ್ಯತೆ ಶೇ. 71. 8 ಗಂಟೆಗೆ ಶೇ. 69, 9 ಗಂಟೆಗೆ ಶೇ. 49 ಮತ್ತು 10 ಗಂಟೆಗೆ ಶೇ. 34 ರಷ್ಟಿದೆ. ಈ ಹಿನ್ನೆಲೆಯಲ್ಲಿ ಪಂದ್ಯ ನಡೆಯಬಹುದೆಂಬುದೇ ಈಗ ಪ್ರಶ್ನೆಯಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತಮ "ಸಬ್ಎರ್ ಸಿಸ್ಟಂ" ಇರುವುದರಿಂದ ಮಳೆ ನಿಂತು 20-30 ನಿಮಿಷಗಳಲ್ಲಿ ಆಟ ಪುನರಾರಂಭ ಸಾಧ್ಯವಾಗುತ್ತದೆ. ಆದರೆ ನಿರಂತರ ಮಳೆಯಾದರೆ ಪಂದ್ಯವೇ ರದ್ದಾಗುವ ಸಾಧ್ಯತೆಯಿದೆ. ಇನ್ನು ಇಂದಿನ ಪಂದ್ಯ ರದ್ದಾದರೆ ಎರಡೂ ತಂಡಗಳು ತಲಾ 1 ಅಂಕ ಪಡೆಯಲಿದೆ.

ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮಳೆ ಅಡ್ಡಿ ಮಾಡಿದ್ದು, 14 ಓವರ್ಗಳ ಕಟೌಟ್ ಪಂದ್ಯ ಆಡಲಾಗಿತ್ತು. ಅಂತಿಮವಾಗಿ ಪಂಜಾಬ್ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತ್ತು.ಇಂದಿನ ಪಂದ್ಯಕ್ಕೂ ಅಂತಹದ್ದೇ ಬೆಳವಣಿಗೆಯ ನಿರೀಕ್ಷೆಯಿದೆ.

 

Author:

...
Keerthana J

Copy Editor

prajashakthi tv

share
No Reviews