ಮಧುಗಿರಿ : ಜೈಲಿನಿಂದ ಬಂದು ಮತ್ತೇ ಜೈಲಿಗೆ ಹೋದ ಮಧುಗಿರಿ DYSP ರಾಮಚಂದ್ರಪ್ಪ

DYSP ರಾಮಚಂದ್ರಪ್ಪ
DYSP ರಾಮಚಂದ್ರಪ್ಪ
ತುಮಕೂರು

ಮಧುಗಿರಿ :

ರಾಸಲೀಲೆ ಪ್ರಕರಣದಲ್ಲಿ ಬಂಧನವಾಗಿದ್ದ ಡಿವೈಎಸ್‌ ಪಿ‌ ರಾಮಚಂದ್ರಪ್ಪ ಜೈಲಿನಿಂದ ಹೊರ ಬಂದ ಕೂಡಲೇ ಮತ್ತೆ ಅರೆಸ್ಟ್ ಆಗಿದ್ದಾರೆ. ಮಧುಗಿರಿ ಡಿವೈಎಸ್ ಪಿ‌ ಆಗಿದ್ದ ರಾಮಚಂದ್ರಪ್ಪ ದೂರು ಕೊಡಲು‌ ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಸಂಬಂಧ  ಡಿವೈಎಸ್‌ ಪಿಯನ್ನು ಅಮಾನತ್ತು ಮಾಡಿ ಬಳಿಕ‌ ಅರೆಸ್ಟ್ ಮಾಡಲಾಗಿತ್ತು .

ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿ ಹೊರ ಬಂದ ಕ್ಷಣದಲ್ಲೇ ಮತ್ತೆ ಮಧುಗಿರಿ‌ ಪೊಲೀಸರಿಂದಲೇ ಬಂಧನವಾಗಿದೆ.  ಎರಡನೇ ಸಂತ್ರಸ್ತ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಡಿವೈಎಸ್‌ ಪಿ ರಾಮಚಂದ್ರಪ್ಪ ಅವರನ್ನು ಶನಿವಾರ ಮಧುಗಿರಿ ಪೊಲೀಸರು ಬಂಧಿಸಿ ತುಮಕೂರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಜೈಲುಪಾಲಾಗಿದ್ದ ರಾಮಚಂದ್ರಪ್ಪಗೆ ಜಾಮೀನು ಮಂಜೂರಾಗಿತ್ತು. ಆದರೆ ಈ ಪ್ರಕರಣದ ಬೆನ್ನಲ್ಲೇ ಎರಡನೇ ಸಂತ್ರಸ್ತೆಯಿಂದ ರಾಮಚಂದ್ರಪ್ಪ‌ ಮೇಲೆ ದೂರು ದಾಖಲಾಗಿತ್ತು.

ಮೊದಲ ದೂರಿನಡಿ ನ್ಯಾಯಾಂಗ ಬಂಧನಲ್ಲಿದ್ದ ರಾಮಚಂದ್ರಪ್ಪಗೆ ಷರತ್ತು ಬದ್ದ ಜಾಮೀನನ್ನು ಮಧುಗಿರಿ ಸೆಷನ್ಸ್ ನ್ಯಾಯಾಲಯ ಎರಡು ಲಕ್ಷ ಮೌಲ್ಯದ ಶೂರಿಟಿ ಬಾಂಡ್, ಇಬ್ಬರ ಜಾಮೀನು ಹಾಗೂ ಮತ್ತಿತರ ಷರತ್ತುಗಳೊಂದಿಗೆ ಮಂಜೂರು ಮಾಡಿತ್ತು. ಆದರೆ ಜೈಲಿನಿಂದ ರಿಲೀಸ್ ಆದ ಕೂಡಲೇ ಪೊಲೀಸರು ‌ಮತ್ತೆ ಬಂಧಿಸಿ ಮಧುಗಿರಿ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.

ಮೊದಲ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ರು ಕೂಡ ಎರಡನೇ ಪ್ರಕರಣದಲ್ಲಿ ರಾಮಚಂದ್ರಪ್ಪ ಮತ್ತೆ ಜೈಲುಪಾಲಾಗಿದ್ದಾರೆ. ಎರಡನೇ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಮತ್ತೆ ಪೊಲೀಸರು ಬಂಧಿಸಿದ್ದು, ರಿಲೀಸ್ ಆದ ಖುಷಿಯಲ್ಲಿದ್ದ ರಾಮಚಂದ್ರಪ್ಪಗೆ ಮತ್ತೆ ಶಾಕ್ ಎದುರಾಗಿದೆ. ಎರಡನೇ ಸಂತ್ರಸ್ತೆ ನೀಡಿದ ದೂರಿನಡಿ ಎಫ್ಐಆರ್ ದಾಖಲಾಗಿತ್ತು. ಹೀಗಾಗಿ ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಿಲಾಗಿದೆ.

 

 

 

Author:

...
Editor

ManyaSoft Admin

Ads in Post
share
No Reviews