ಕೆರೆಯಲ್ಲಿ ಬೋಟಿಂಗ್ ಮಾಡಿದ ಸಚಿವ K N ರಾಜಣ್ಣತುಮಕೂರು
ಮಧುಗಿರಿ:
ಮಧುಗಿರಿ ಜನರ ಆರಾಧ್ಯ ದೈವ ದಂಡಿನಮಾರಮ್ಮ ತೆಪ್ಪೋತ್ಸವ ನಡೆದ ಬೆನ್ನಲ್ಲೇ ಭಕ್ತರಿಗೆ, ಪ್ರವಾಸಿಗರಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ಹೌದು ಬರೋಬ್ಬರಿ 50 ವರ್ಷಗಳ ಬಳಿಕ ದಂಡಿನಮಾರಮ್ಮ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗಿದ್ದು, ಇದೀಗ ತೆಪ್ಪೋತ್ಸವ ನಡೆದ ಮಧುಗಿರಿಯ ಚೋಳೇನಹಳ್ಳಿ ಕೆರೆಯಲ್ಲಿ ಬೋಟಿಂಗ್ಗೆ ಚಾಲನೆ ನೀಡಲಾಗಿದೆ. ಸುತ್ತಲೂ ಬೆಟ್ಟ ಮಧ್ಯದಲ್ಲಿ ಕೆರೆ, ಬೋಟಿಂಗ್ನಲ್ಲಿ ರೈಡ್ ಮಾಡಿ ಪ್ರಕೃತಿ ಸೌಂದರ್ಯವನ್ನು ಪಡೆಯುವ ಅವಕಾಶ ಸಿಕ್ಕಿದ್ದು, ಜನರಂಥೂ ಈ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಏಕಶಿಲಾ ಬೆಟ್ಟಕ್ಕೆ ಹೆಸರುವಾಸಿಯಾಗಿರೋ ಮಧುಗಿರಿಯ ಚೋಳೇನಾ ಕೆರೆ ಪ್ರವಾಸಿ ತಾಣವಾಗಿ ಮಾರ್ಪಡುತ್ತಿದೆ. ಹೀಗಾಗಿ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಕೆರೆಯಲ್ಲಿ ಬೋಟಿಂಗ್ಗೆ ಚಾಲನೆ ನೀಡಿದರು. ಬೋಟಿಂಗ್ಗೆ ಚಾಲನೆ ನೀಡಿದ ಬಳಿಕ ಒಂದು ರೌಂಡ್ಸ್ ಕೆರೆಯಲ್ಲಿ ಬೋಟಿಂಗ್ನಲ್ಲಿ ಜಾಲಿ ರೈಡ್ ಮಾಡಿ ಫುಲ್ ಎಂಜಾಯ್ ಮಾಡಿದರು. ಇಷ್ಟು ದಿನ ರಾಜಕೀಯ ಜಂಜಾಟದಲ್ಲೇ ಬ್ಯೂಸಿಯಾಗಿದ್ದ ಸಚಿವ ರಾಜಣ್ಣ ಬೋಟಿಂಗ್ಗೆ ಚಾಲನೆ ನೀಡುವ ನೆಪದಲ್ಲಿ ತನ್ನ ಆಪ್ತರ ಜೊತೆ ಬೋಟಿಂಗ್ನಲ್ಲಿ ಜಾಲಿ ರೈಡ್ ಮಾಡಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ರು. ಸದ್ಯ ಕೆರೆಯಲ್ಲಿ ತಾತ್ಕಾಲಿಕವಾಗಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಶಾಶ್ವತವಾಗಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಕೆ,ಎನ್ ರಾಜಣ್ಣ ತಿಳಿಸಿದ್ದಾರೆ.
ಇನ್ನು ಸಾಮಾನ್ಯ ಜನರು ಬೋಟಿಂಗ್ ಅಲ್ಲಿ ಹೋಗಬೇಕು ಅಂದರೆ ಬೀಚ್ಗೇ ಹೋಗಬೇಕು. ಯುವಕರಂಥೂ ಹೋಗಿ ಎಂಜಾಯ್ ಮಾಡುತ್ತಾರೆ. ಆದರೆ ಹಳ್ಳಿಯಲ್ಲಿರೋ ಜನರು, ಬಡವರು ಅಷ್ಟು ದೂರ ಹೋಗಿ ಬೋಟಿಂಗ್ ಮಾಡಲು ಸಾಧ್ಯವಾಗೋದಿಲ್ಲ. ಆದರೀಗ ತಾಲೂಕಿನಲ್ಲೇ ಬೋಟಿಂಗ್ ಆರಂಭಿಸುತ್ತಿರೋದಕ್ಕೆ ಮಧುಗಿರಿ ಜನರಂಥೂ ಫುಲ್ ಖುಷ್ ಆಗಿದ್ದಾರೆ.